ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಲ್ಲಿ ಎ1 ಆರೋಪಿ ಪವಿತ್ರಾ ಗೌಡ ಆಪ್ತೆ ಸಮತಾ ಅಲಿಯಾಸ್ ಸ್ಯಾಮ್‌ಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ. ಇದಕ್ಕೆ ಕಾರಣ ಏನು ಅಂತ ನೋಡೋದಾದ್ರೆ ಪ್ರಕರಣ ಎ6 ಆರೋಪಿ ಧನರಾಜ್‌ಗೆ ಸಮತಾ ಫೋನ್ ಪೇ ಮೂಲಕ ಹಣ ಸಂದಾಯ ಮಾಡಿದ್ದಾಳೆ. ಕೊಲೆ ಬಳಿಕ ಹಣ ಕೊಡಲು ಕಾರಣವೇನು? ಈ ಹಣವನ್ನು ಯಾಕೆ ಕೊಟ್ಟಿದ್ದಾಳೆ? ಈ ಹಣ ಕೊಡಲು ಪವಿತ್ರಾ ಹೇಳಿದ್ದಳಾ? ಇಲ್ಲ ಸಮತಾಗೆ ಧನರಾಜ್ ಪರಿಚಯ ಇತ್ತಾ ಅನ್ನೋದು ಗೊತ್ತಾಗಬೇಕಿದೆ. ಧನರಾಜ್ ರೇಣುಕಾಸ್ವಾಮಿಗೆ ಎಲೆಕ್ಟ್ಟಿಕ್ ಶಾಕ್ ನೀಡಲು ಮೆಗ್ಗಾರ್ ತಂದಿದ್ದ. ಇದೇ ವಿಚಾರಕ್ಕೆ ಸಮತಾ ಫೋನ್ ಪೇನಿಂದ ಧನರಾಜ್‌ಗೆ ಹಣ ನೀಡಲಾಗಿದೆಯಾ ಎಂದು ತಿಳಿದುಕೊಳ್ಳಲು ನೋಟೀಸ್ ಜಾರಿ ಮಾಡಲಾಗಿದೆ. ಸಮತಾ ನಾಳೆ ವಿಚಾರಣೆಗೆ ಹಾಜರಾಗೋ ಸಾಧ್ಯತೆಯಿದೆ.
