ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಡೀಲ್ ಮಾಡಲಾಗಿದ್ದ 30 ಲಕ್ಷ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆಯ ಬಳಿಕ ಮೃತದೇಹ ಸಾಗಿಸಲು ಹಣ ಹಂಚಿಕೊಳ್ಳಲು ಪ್ಲಾನ್ ಮಾಡಲಾಗಿತ್ತು. ನಟ ದರ್ಶನ್ ಕೊಟ್ಟಿದ್ದ ಮೂವತ್ತು ಲಕ್ಷ ಹಣವನ್ನ ಆಪ್ತನೊಬ್ಬನ ಮನೆಯಲ್ಲಿಡಲಾಗಿತ್ತು. ಆರೋಪಿಗಳು ಹಣದ ಬಗ್ಗೆ ಬಾಯ್ಬಿಟ್ಟಿದ್ದು, ಹಣವನ್ನು ಸೀಜ್ ಮಾಡಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹಣವನ್ನು ನಟ ದರ್ಶನ್ ಅವರಿಂದ ಪ್ರದೋಶ್ ಪಡೆದುಕೊಂಡಿದ್ದ. ನಂತರ ಕಾರ್ತಿಕ್ ಮೂಲಕ ಹಣ ನೀಡಿಸಲಾಗಿತ್ತು. ಹಣವನ್ನು ಇಟಿದ್ದ ಕಡೆಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
