ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸಾಕ್ಷಿ ನಾಶಕ್ಕೆ ಯತ್ನವೊಂದು ನಡೆದಿರುವುದು ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಶವ ಸಾಗಿಸಿದ ಸ್ಕಾರ್ಪಿಯೋ ಕಾರಿನ ಮೇಲೆ ಮೊದಲು ಡಿಬಾಸ್ ಎಂದು ಹಾಗೂ ದರ್ಶನ್ ಚಿತ್ರದ ಪೋಟೋ ಇತ್ತು. ಆದರೆ ಆರೋಪಿಗಳು ಇದನ್ನ ಶವ ಸಾಗಿಸಿದ ಮೇಲೆ ತೆಗೆಸಿದ್ದಾರೆ.
ಕೊಲೆಯ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಆರೋಪಿಗಳು ಸ್ಕಾರ್ಪಿಯೋ ಕಾರಿನ ಮೇಲಿದ್ದ ಗುರುತು ತೆಗೆಸಿದಿದ್ದಾರೆ. ಗುರುತು ಸಿಗಬಾರದು ಎಂದು ಈ ರೀತಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸಂಚಾರಿ ಪೊಲೀಸರ ಟ್ರಾಫಿಕ್ ವೈಲೇಶನ್ನಲ್ಲಿ ಸೆರೆಯಾಗಿರುವ ಪೋಟೋದಲ್ಲಿ ದೃಶ್ಯ ಸೆರೆಯಾಗಿದೆ.