ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 30 ಸ್ಯಾಂಪಲ್‌ಗಳಿಗೆ ಸಂಬಂಧಿಸಿದ ಆಡಿಯೋ ವಿಡಿಯೋ ವರದಿ ಸಲ್ಲಿಕೆಯಾಗಿದೆ. ಆರೋಪಿಗಳು ಟ್ರೆಂಡ್ಸ್‌ನಲ್ಲಿ ಬಟ್ಟೆ ಖರೀದಿಸಿದ ಸಿಸಿಟಿವಿ ಫೂಟೇಜ್, ಮಾರಮ್ಮ ದೇವಸ್ಥಾನಕ್ಕೆ ಕೈ ಮುಗಿದ ವಿಡಿಯೋ, ಶವ ಬಿಸಾಡಿದ ಸ್ಥಳದಲ್ಲಿ ಸತ್ವ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ಫೂಟೇಜ್. ತುಮಕೂರಿನ ದುರ್ಗಾ ಬಾರ್‌ನಲ್ಲಿ ಎಣ್ಣೆ ಖರೀದಿಸಿದ ಸಿಸಿಟಿವಿ ಫೂಟೇಜ್, ಚಿತ್ರದುರ್ಗ ಟು ಬೆಂಗಳೂರು ಟೋಲ್‌ಗಳ ಸಿಸಿಟಿವಿ ಫೂಟೇಜ್, ಚಿತ್ರದುರ್ಗದ ಬಾಲಾಜಿ ಬಾರ್‌ನ ಸಿಸಿಟಿವಿ ವಿಡಿಯೋ, ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್‌ನ ಸಿಸಿಟಿವಿ, ಆರೋಪಿಗಳು ಶರಣಾಗತಿಗೆ ಬಂದ ವೇಳೆ ಸಿಸಿಟಿವಿ, ರೇಣುಕಾಸ್ವಾಮಿ ಫೋಟೋ ಇರುವ ಪೆನ್ ಡ್ರೈವ್, ಎ1 ಪವಿತ್ರಾ ಗೌಡ & ದರ್ಶನ್‌ಗೆ ಸಂಬಂಧಿಸಿದ ಫೋಟೋಗಳು, ಇತರೆ 15 ಜನ ಆರೋಪಿಗಳಿಗೆ ಸಂಬಂಧಿಸಿದ ಫೋಟೋಗಳು. ಸಾಕ್ಷಿದಾರರ ಫೋಟೋಗಳು ಕೂಡ ರಿಟ್ರೀವ್‌ನಲ್ಲಿ ಪತ್ತೆಯಾಗಿವೆ. ದರ್ಶನ್ ಮನೆಯ ಸಿಸಿಟಿವಿ ಡಿವಿಆರ್ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ & ಪಟ್ಟಣಗೆರೆ ಶೆಡ್‌ನ ಸಿಸಿಟಿವಿ. ಆರೋಪಿಗಳ ವಾಹನಗಳು ಮಾತೇಶ್ವರಿ ಸ್ಟೋರ್ ಬಳಿಯ ಸಿಸಿಟಿವಿ.ಪವಿತ್ರಾ ಗೌಡ ಮನೆಯ ಸಿಸಿಟಿವಿ ಫೂಟೇಜ್. ಬಾಡಿ ಬಿಸಾಡಲು ಹೋದ ವೇಳೆ ಸೆರೆಸಿಕ್ಕ ಸಿಸಿಟಿವಿ ವಿಡಿಯೋ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಸಿಸಿಟಿವಿ. ಈ ಎಲ್ಲಾ ಆಡಿಯೋ ವಿಡಿಯೋ ವರದಿಗೆ ಸಂಬಂಧಿಸಿದಂತೆ ತಜ್ಞರ ಅಭಿಪ್ರಾಯ ಪಡೆದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.