ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿರುವ ತೃಣಮೂಲ ಕಾಂಗ್ರೆಸ್ ಮುಖಂಡರೊಬ್ಬರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ತಂಡ ರೈಡ್ ನಡೆಸಿದ ವೇಳೆ 100 ಕ್ಕೂ ಹೆಚ್ಚು ಪ್ರಚೋದಿತ ಗ್ರಾಮಸ್ಥರ ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿದ ಘಟನೆ ಇಂದು ನಡೆದಿದೆ. ಘಟನೆಯಲ್ಲಿ ಇಡಿ ತಂಡದ ಹಲವು ಸದಸ್ಯರಿಗೆ ಗಾಯಗಳಾಗಿವೆ.
ಪಡಿತರ ಹಗರಣ ಪ್ರ ಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಂಗಾಳದಲ್ಲಿ ಶೋಧ ನಡೆಸುತ್ತಿದೆ ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ 24 ಪರಗಣದ ಬಂಗಾವ್ ನಲ್ಲಿರುವ ಪುರಸಭೆಯ ಮಾಜಿ ಅಧ್ಯಕ್ಷ ಶಂಕರ್ ಅಧ್ಯ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು.
ಅಧಿಕಾರಿಗಳ ತಂಡ ತೃಣಮೂಲ ಕಾಂಗ್ರೆಸ್ ನಾಯಕನ ನಿವಾಸವನ್ನು ತಲುಪಿದಾಗ, 100-200 ಕ್ಕೂ ಹೆಚ್ಚು ಪ್ರಚೋದಿತ ಸ್ಥಳೀಯರ ಗುಂಪು ಇಡಿ ಅಧಿಕಾರಿಗಳು ಮತ್ತು ಕೇಂದ್ರ ಸಶಸ್ತ್ರ ಅರೆಸೇನಾ ಪಡೆಗಳನ್ನು ಸುತ್ತುವರೆದು ಅವರ ಮೇಲೆ ದಾಳಿ ನಡೆಸಿದೆ.
ದಾಳಿಯನ್ನು ಖಂಡಿಸಿರುವ ಬಿಜೆಪಿ, ತೃಣಮೂಲ ಕಾಂಗ್ರೆಸ್ ರಾಜ್ಯ ದಲ್ಲಿ ಕಾನೂನು ಮತ್ತು ಸುವ್ಯ ವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿ ಸುತ್ತಿದೆ ಎಂದು ಆರೋಪಿಸಿದೆ.