ಬೆಂಗಳೂರು: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮಳೆ ಆಶಾದಾಯಕವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೊ ದುರ್ಬಲಗೊಳ್ಳುವುದರಿಂದ ಆಗಸ್ಟ್ ವೇಳೆಗೆ ಲಾ ನಿನಾ ರೂಪುಗೊಂಡು ಭಾರಿ ಮಳೆಯನ್ನು ತರುತ್ತದೆ.
ಕಳೆದ ವರ್ಷ ಎಲ್ ನಿನೋದಿಂದಾಗಿ ಮಳೆ ಕಡಿಮೆಯಾಗಿತ್ತು. ಆದರೆ, ಈ ಬಾರಿ ನೈರುತ್ಯ ಹಂಗಾಮಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹೇಳಿದೆ. ಆದರೆ, ಬೇಸಿಗೆಯಲ್ಲಿ ಬಿಸಿಲಿನ ತೀವ್ರತೆಯೂ ಹೆಚ್ಚು ಇರಲಿದೆ ಎಂದು ಅದು ಹೇಳಿದೆ.