ಬೆಂಗಳೂರು: ಕುಸುಮ್ -ಬಿ ಯೋಜನೆಯಡಿ ಸೌರ ಕೃಷಿ ಪಂಪ್ ಸೆಟ್ ಅಳವಡಿಸಲು ಕೇಂದ್ರ ಸರ್ಕಾರದಿಂದ ಶೇಕಡ 30ರಷ್ಟು ಸಬ್ಸಿಡಿ, ರಾಜ್ಯ ಸರ್ಕಾರದಿಂದ ಶೇಕಡ 30ರಷ್ಟು ಸಬ್ಸಿಡಿ ನೀಡಲಿದ್ದು, ಉಳಿದ ಶೇಕಡ 40ರಷ್ಟು ಪಾಲನ್ನು ಫಲಾನುಭವಿ ರೈತರು ಭರಿಸಬೇಕಿದೆ.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಸಬ್ಸಿಡಿ ಪಾಲನ್ನು ಶೇಕಡ 30 ರಿಂದ 50ಕ್ಕೆ ಹೆಚ್ಚಳ ಮಾಡಿದೆ. ಈ ಹಿನ್ನೆಲೆಯಲ್ಲಿ ಇದುವರೆಗೆ ರಾಜ್ಯದ 18 ಸಾವಿರ ರೈತರು ಸೌರ ಪಂಪ್ಸೆಟ್ ಪಡೆಯಲು ಸೌರ ಮಿತ್ರ ವೆಬ್ಸೈಟ್ ಅಪ್ಲಿಕೇಶನ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ರೈತರು ತಮ್ಮ ಆಧಾರ್, ಆರ್.ಟಿ.ಸಿ., ಬ್ಯಾಂಕ್ ವಿವರಗಳೊಂದಿಗೆ ಆನ್ಲೈನ್ https://souramitra.com ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ 080 -22202100 ಸಂಪರ್ಕಿಸಬಹುದು.