ಬೆಂಗಳೂರು: ರಾಜ್ಯದಲ್ಲಿ ಬರಗಾಲ ಏರ್ಪಟ್ಟಿದ್ದು ಬರಗಾಲದಿಂದ ಅಪಾರ ಬೆಳೆ ಹಾನಿಯಾಗಿ ರೈತರಿಗೆ ನಷ್ಟವಾಗಿತ್ತು.ಹಾಗಾಗಿ ರೈತರಿಗೆ ಮೊದಲನೇ ಕಂತಿನಲ್ಲಿ ತಲಾ ರೂ. 2,000 ಪರಿಹಾರ ನೀಡಲು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ರೂ.105 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಶೇ. 33 ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾಗಿರುವ ರೈತರಿಗೆ ಮಾತ್ರ ಪರಿಹಾರ ವಿತರಿಸಲಾಗುವುದು ಎಂದು ಕಂದಾಯ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಎಸ್ ಡಿಆರ್ ಎಫ್ ನಿಂದ ಒಬ್ಬ ರೈತರಿಗೆ ಎರಡು ಹೆಕ್ಟೇರ್ ಜಮೀನಿಗೆ ತಕ್ಕಂತೆ ಪರಿಹಾರ ವಿತರಿಸಲಾಗುತ್ತಿದೆ.
ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ ಗೆ ರೂ. 8,500 ನಿಗದಿ ಪಡಿಸಲಾಗಿದ್ದು, ನೀರಾವರಿ ಬೆಳೆಗಳಿಗೆ ರೂ. 17,00 ನಿಗದಿಪಡಿಸಲಾಗಿದೆ ಮತ್ತು ಬಹುವಾರ್ಷಿಕ ಬೆಳೆಗಳಿಗೆ ರೂ. 22,500 ಪರಿಹಾರ ನಿಗದಿಪಡಿಸಲಾಗಿದೆ. ಅದರಲ್ಲಿ ಮೊದಲ ಕಂತಿನಲ್ಲಿ ರೂ. 2,000 ಪಾವತಿಸಲಾಗುತ್ತದೆ.