ರೈತರಿಗೆ ತಮ್ಮ ಜಮೀನಿಗೆ ಹೋಗುವ ದಾರಿ ಸಮಸ್ಯೆ: ಕರ್ನಾಟಕ ಹೈಕೋರ್ಟ್ ರೈತರ ಪರವಾಗಿ ಮಹತ್ವದ ಆದೇಶ

ಗ್ರಾಮೀಣ ಭಾಗದ ರೈತರಿಗೆ ತಮ್ಮ ಜಮೀನಿಗೆ ಹೋಗುವ ದಾರಿ ಸಮಸ್ಯೆಯು ಸರ್ವೆ ಸಾಮಾನ್ಯವಾಗಿದೆ ಈ ಕುರಿತು ಪ್ರಸ್ತುತ ಕರ್ನಾಟಕ ಹೈಕೋರ್ಟ್ ರೈತ ಪರವಾಗಿ ಮಹತ್ವದ ಆದೇಶವನ್ನು ನೀಡಿದೆ.

ಕಾಲುದಾರಿ, ಬಂಡಿದಾರಿ  ಕೂಡ ರಸ್ತೆಗಳೇ, ಯಾರೂ ಕೂಡ ಅದಕ್ಕ ಅಡೆ-ತಡೆ ಮಾಡುವ ಹಾಗಿಲ್ಲ ಎಂದು ಹೈಕೊರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ಕುರಿತು ನೀಡಿರುವ ಆದೇಶದ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಸಾಮಾನ್ಯವಾಗಿ ಕೃಷಿ ಜಮೀನಿಗೆ ಹೋಗುವ ದಾರಿಯನ್ನು “ಬಿ ಖರಾಬು ಜಮೀನು” ಎಂದು ಜಮೀನಿನ ಪಹಣಿ/RTC ಅಲ್ಲಿ ಗುರುತಿಸಿರುತ್ತಾರೆ ಈ ಜಮೀನನ್ನು ಕಾಲುದಾರಿ ಮತ್ತು ಬಂಡಿದಾರಿಗೆ ಮೀಸಲಿಡಲಾಗಿರುತ್ತದೆ.

Advertisement

” ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.”

‘ಬಿ ಖರಾಬ್’ ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ: ಹೈಕೋರ್ಟ್

ರಸ್ತೆಗಳು ಎಂಬ ಪರಿಕಲ್ಪನೆಯಲ್ಲಿ ಕಾಲುದಾರಿ, ಬಂಡಿ ಹಾಡು ಕೂಡಾ ಒಳಗೊಂಡಿರುತ್ತವೆ’ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭೂಸ್ವಾಧೀನ ಕಾಯ್ದೆಯಡಿ ಜಮೀನು ಸ್ಮಾಧೀನಪಡಿಸಿಕೊಂಡ ಮಾತ್ರಕ್ಕೆ ‘ಬಿ ಖರಾಬ್’ ಭೂಮಿಯಲ್ಲಿ ಸಾರ್ವಜನಿಕರ ಹಕ್ಕನ್ನು ರದ್ದುಪಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

‘ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 67ರ(land records) ಪ್ರಕಾರ ಎಲ್ಲಾ ಸಾರ್ವಜನಿಕ ರಸ್ತೆಗಳು, ಬೀದಿಗಳು, ಒಣಿಗಳು, ಪಥಗಳು, ಸೇತುವೆಗಳು, ಕಂದಕಗಳು, ತಡೆಗೋಡೆಗಳು ಮತ್ತು ಬೇಲಿಗಳು ಸರ್ಕಾರಕ್ಕೆ ಸೇರಿವೆ ಎಂದು ಸೂಚಿಸುತ್ತದೆ. ಕಾಲುದಾರಿ ಅಥವಾ ಬಂಡಿ ದಾರಿ ಎಂದು ಈ ಹಿಂದೆ ಕರೆಯಲಾಗುತ್ತಿದ್ದ ರಸ್ತೆಗಳೆನಿಸಿವೆ’ ಎಂದು ನ್ಯಾಯಪೀಠ ಹೇಳಿದೆ.

‘ಕಾಲುದಾರಿ, ಬಂಡಿ ದಾರಿ ಸ್ಥಳವನ್ನು ಗ್ರಾಮದ ನಕ್ಷೆಯಲ್ಲಿ ಮತ್ತು ಸಂಬಂಧಿತ ಕಂದಾಯ ದಾಖಲೆಗಳಲ್ಲಿ ಗುರುತಿಸಲಾಗಿದೆ. ಭೂಮಾಲೀಕರಿಗೆ ಸಂಬಂಧಿಸಿದಂತೆ ಈ ಭಾಗವನ್ನು ‘ಬಿ ಖರಾಬ್’ ಎಂದು ಗುರುತಿಸಲಾಗಿದ್ದು. ಈ ಜಮೀನುಗಳು ಸರ್ಕಾರಕ್ಕೆ ಸೇರಿದ್ದರೂ, ಸಾರ್ವಜನಿಕರ ಹಕ್ಕನ್ನೂ ನೀಡಲಾಗಿರುತ್ತದೆ’ ಎಂದು ನ್ಯಾಯಪೀಠ ತಿಳಿಸಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 68ರ ಪ್ರಕಾರ ಬಿ ಖರಾಬ್‌’ನಲ್ಲಿ(revenue department) ಸಾರ್ವಜನಿಕರ ಹಕ್ಕನ್ನು ಕಸಿದುಕೊಳ್ಳಲಾಗಿಲ್ಲ. ಈ ಸ್ಥಳದ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಅಥವಾ ಸಾರ್ವಜನಿಕರು ಕಾಲುದಾರಿ ಬಳಸಲು ಅರ್ಹರಾಗಿರುತ್ತಾರೆ. ಹಾಗಾಗಿ, ಅರ್ಜಿದಾರರು ಈ ಭೂಮಿಯನ್ನು ಮೀಸಲಿಡಬೇಕಾಗಿತ್ತು ಮತ್ತು ಅದನ್ನು ಮಾರುಕಟ್ಟೆ ಪ್ರಾಂಗಣದ ಉದ್ದೇಶಗಳಿಗಾಗಿ ಬಳಸಬಾರದು’ ಎಂದು ನ್ಯಾಯಪೀಠ ವಿವರಿಸಿದೆ.

ನಿಮ್ಮ ಹಳ್ಳಿಯ ಬಂಡಿದಾರಿ ಮತ್ತು ಕಾಲುದಾರಿ ನಕ್ಷೆಯನ್ನು ಗುರುತಿಸುವ ನಕ್ಷೆಯನ್ನು ಡೌನ್ಲೋಡ್ ಮಾಡುವ ವಿಧಾನ:

ರೈತರು ತಮ್ಮ ಹಳ್ಳಿಯ ಬಂಡಿದಾರಿ ಮತ್ತು ಕಾಲುದಾರಿ ನಕ್ಷೆಯನ್ನು ಗುರುತಿಸುವ ನಕ್ಷೆಯನ್ನು ಮೊಬೈಲ್ ನಲ್ಲಿ ಹೇಗೆ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ವಿವರಿಸಲಾಗಿದೆ.

Step-1: ಮೊದಲಿಗೆ ಈ Village map download ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಂದಾಯ ಇಲಾಖೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕಾಣುವ “ಕಂದಾಯ ನಕ್ಷೆಗಳು” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, cadastral maps ಎಂದು ಆಯ್ಕೆ ಮಾಡಿಕೊಂಡು “Pdf file” ವಿಭಾಗದಲ್ಲಿ ಕಾಣುವ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದ ಕಂದಾಯ ನಕ್ಷೆ ಡೌನ್ಲೋಡ್ ಅಗುತ್ತದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement