ರೈತರಿಗೆ ಸಿಗುತ್ತೆ 5 ಲಕ್ಷ ರೂಪಾಯಿಗಳವರೆಗಿನ ಸಾಲ:
ರೈತರಿಗೆ ಅನುಕೂಲವಾಗುವಂತಹ ಈ ಯೋಜನೆಯಲ್ಲಿ ಹೈನುಗಾರಿಕೆ ಮಾಡುವವರಿಗೆ ಹಾಗೂ ಪಶುಸಂಗೋಪನೆ ಮಾಡುವವರಿಗೆ 5 ಲಕ್ಷಗಳ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಈ ಯೋಜನೆಯು ರೈತರಿಗೆ ಹೆಚ್ಚು ಸಹಾಕಾರಿಯಾಗಿದ್ದು, ಇದರಿಂದ ರೈತರು ಕೇವಲ ವಾರ್ಷಿಕ ಬೆಳೆಯನ್ನು ಮಾತ್ರ ಬೆಳೆಯುವುದು ಅಲ್ಲದೆ ಉಪಕಸುಬು ಮಾಡುವುದರ ಮೂಲಕವೂ ಕೂಡ ಹಣ ಸಂಪಾದನೆ ಮಾಡಬಹುದು. ಈ ಯೋಜನೆಯಿಂದ ರೈತರ ಆರ್ಥಿಕತೆ ಹೆಚ್ಚಳವಾಗಲಿದೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ:
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದು. ಮಾತ್ರವಲ್ಲದೆ ಪಶು ಸಂಗೋಪನೆ ಮೀನುಗಾರಿಕೆ ಮೊದಲಾದ ಕೃಷಿ ಚಟುವಟಿಕೆಗಳಿಗೆ ಉತ್ತಮ ರೀತಿಯ ಸಾಲ ಸೌಲಭ್ಯ ನೀಡುವ ಯೋಜನೆ ಇದಾಗಿದೆ. ಅತೀ ಕಡಿಮೆ ಬಡ್ಡಿ ದರದಲ್ಲಿ ಮೂರರಿಂದ ಐದು ಲಕ್ಷ ರೂಪಾಯಿಗಳವರೆಗೆ ಈ ಮೇಲಿನ ಎಲ್ಲಾ ಉಪಕಸುಬುಗಳನ್ನು ಮಾಡಲು ರೈತರು ಸರ್ಕಾರದಿಂದ ಸಾಲ ಸೌಲಭ್ಯ ಪಡೆಯಬಹುದು.
ಕೆಸಿಸಿ ಕಾರ್ಡ್ ಇದ್ದರೆ ಪಶು ಸಂಗೋಪನೆ, ಎಮ್ಮೆ ಸಾಕಾಣಿಕೆ, ಹಸು ಸಾಕಾಣಿಕೆ, ಕುರಿ ಕೋಳಿ ಮೇಕೆ ಮೊದಲಾದವುಗಳ ಸಾಕಾಣಿಕೆಗೆ ಮೂರು ಲಕ್ಷ ರೂಪಾಯಿಗಳ ಸಾಲ ಸಿಗುತ್ತದೆ. ಈ ಯೋಜನೆಯಲ್ಲಿ ಶೇಕಡ 3% ರಷ್ಟು ಬಡ್ಡಿ ದರವನ್ನು ರೈತರು ಪಾವತಿಸಿದರೆ 4% ಬಡ್ಡಿ ದರವನ್ನು ಬ್ಯಾಂಕುಗಳಿಗೆ ಸರ್ಕಾರ ನೀಡುತ್ತದೆ. ಅಂದರೆ 7% ಬಡ್ಡಿದರದ ಸಾಲ ಸೌಲಭ್ಯವನ್ನು ಕೇವಲ 3% ಬಡ್ಡಿ ದರಕ್ಕೆ ಗಳಿಸಬಹುದು.
ಪಶುಸಂಗೋಪನೆಗೆ ಸಿಗುತ್ತದೆ ಇಷ್ಟು ಸಾಲ:
ಎಮ್ಮೆ ಸಾಕಾಣಿಕೆಗೆ – 60,249 ರೂ.
ಹಸು ಸಾಕಾಣಿಕೆಗೆ – 40,783 ರೂಪಾಯಿ
ಮೊಟ್ಟೆಯನ್ನ ಇಡುವ ಕೋಳಿಗೆ ಪ್ರತಿ ಕೋಳಿಗೆ 720 ರೂಪಾಯಿ
ಕುರಿಗಳು ಅಥವಾ ಮೇಕೆಗಳ ಸಾಕಾಣಿಕೆ – ಪ್ರತಿ ಮೇಕೆ ಅಥವಾ ಕುರಿಗೆ 4063 ರೂಪಾಯಿ ಹಣವನ್ನು ಸಾಲವಾಗಿ ನೀಡಲಾಗುವುದು.
ವಿಶೇಷ ಅಂದರೆ 1.6 ಲಕ್ಷ ರೂಪಾಯಿಗಳ ವರೆಗೆ ಯಾವುದೇ ಗ್ಯಾರಂಟಿಯನ್ನು ಕೂಡ ನೀವು ಕೊಡಬೇಕಾಗಿಲ್ಲ. ಯಾವ ಗ್ಯಾರೆಂಟಿ ಯು ಇಲ್ಲದೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕವೇ ಸಾಲ ಪಡೆಯಬಹುದು.
ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕಿಸಾನ್ ಕ್ರೆಡಿಟ್ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಥವಾ ಹತ್ತಿರದ ಬ್ಯಾಂಕ್ ನಲ್ಲಿ ಈ ಬಗ್ಗೆ ವಿಚಾರಿಸಿ ಮಾಹಿತಿ ತಿಳಿದುಕೊಳ್ಳಿ.