ದೆಹಲಿ: ಬರಗಾಲ ಬಿರುಬಿಸಿಲ ಬೇಸಿಗೆ ನಡುವೆಯೇ ರೈತಾಪಿ ವರ್ಗಕ್ಕೆ ಈ ಬಾರಿ ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ ಸಿಕ್ಕಿದೆ.
ಮುಂಗಾರು ಋತುವಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇದರಿಂದಾಗಿ ಬರದಿಂದ ಕಂಗಾಲಾದ ರೈತರಿಗೆ ಸಮಾಧಾನ ತಂದಿದೆ.
ಮೇ ನಂತರ ಫ್ರೆಸಿಪಿಕ್ ಪ್ರದೇಶದಲ್ಲಿ ಎಲ್ ನೀನೋ ಮತ್ತು ಲಾ ನಿನಾ ಪರಿಸ್ಥಿತಿಗಳ ಪ್ರಭಾವ ತಗ್ಗುತ್ತದೆ. ಹೀಗಾಗಿ ಭಾರತದಲ್ಲಿ ಉತ್ತಮ ಮುಂಗಾರು ಮಳೆ ಆಗಲಿದೆ. ಈ ಬಾರಿ ದೀರ್ಘ ಬೇಸಿಗೆ ಆತಂಕದ ನಡುವೆಯೂ ಮುಂಗಾರು ಋತುವಿನಲ್ಲಿ ಉತ್ತಮ ಮಳೆಯಾಗುವ ಸಂಭವ ಇದೆ ಎಂದು ಹೇಳಲಾಗಿದೆ.