ರೈತರ ಖಾತೆಗೆ ಜಮಾ ಆದ ಬರ ಪರಿಹಾರದ ಮೊತ್ತವನ್ನು ಬ್ಯಾಂಕುಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿವೆ.
ಪ್ರತಿ ಹೆಕ್ಟೇರ್ ಮಳೆಯಾಶ್ರಿತ ಒಣ ಬೇಸಾಯಕ್ಕೆ 8,500, ನೀರಾವರಿಗೆ 17,000, ಬಹುವಾರ್ಷಿಕ/ತೋಟಗಾರಿಕೆ ಬೆಳೆಗೆ 22,500 ಪರಿಹಾರವನ್ನು ಸರ್ಕಾರ ನಿಗದಿಪಡಿಸಿದೆ.
ಈ ಪರಿಹಾರದ ಹಣವನ್ನು ಬ್ಯಾಂಕುಗಳಲ್ಲಿ ರೈತರ ಉಳಿತಾಯ ಖಾತೆಗೆ ಜಮಾ ಮಾಡದೆ ಸಾಲದ ಖಾತೆಗೆ ಜಮಾಮಾಡಿಕೊಳ್ಳುತ್ತಿದೆ.
ಯಾದಗಿರಿ ಜಿಲ್ಲೆ ಪ್ರಗತಿ ಕೃಷ್ಣ ಬ್ಯಾಂಕಿನಲ್ಲಿ ಅನೇಕ ರೈತರ ಖಾತೆಗೆ ಬಂದ ಪರಿಹಾರದ ಮೊತ್ತವನ್ನು ಸಾಲದ ಖಾತೆಗೆ ಜಮಾಮಾಡಲಾಗಿದ್ದು, ರೈತರು ಪ್ರತಿಭಟನೆ ನಡೆಸಿದ್ದಾರೆ.