ಸರ್ಕಾರ ಸಿರಿಧಾನ್ಯ ಬೆಳೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರೈತ ಸಿರಿ ಯೋಜನೆ ಜಾರಿಗೆ ತಂದಿತ್ತು. ಇದರಡಿಯಲ್ಲಿ ಧಾನ್ಯ ಬೆಳೆಯುವುದಕ್ಕೆ ಬೇಕಾಗಿರುವ ಬೀಜಗಳು & ರಸಗೊಬ್ಬರ ಪೂರೈಕೆಗಾಗಿ ಸರ್ಕಾರ 10,000 ರೂ. ನೀಡುತ್ತದೆ.
ಈ ಹಣವು ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಸಿರಿಧಾನ್ಯ ಬೆಳೆ ಕುರಿತು ರೈತರಲ್ಲಿ ಅರಿವು ಮೂಡಿಸಲು ಹಂತ ಹಂತವಾಗಿ ಟ್ರೈನಿಂಗ್ ಕೂಡ ನೀಡಲಾಗುತ್ತದೆ.
ಸಣ್ಣ ಅಥವಾ ಮಧ್ಯಮ ಗಾತ್ರದ ರೈತ (2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವವರು) ಅರ್ಹರು. ಹೆಚ್ಚಿನ ಮಾಹಿತಿಗಾಗಿ https://raitamitra.karnataka.gov.in/info-2/Raita+Siri/en ಭೇಟಿ ನೀಡಿ.