ಭಾರತೀಯ ರೈಲ್ವೆಯು ಸಾಮಾನ್ಯ ರೈಲು ಪ್ರಯಾಣದ ಕನಿಷ್ಠ ಟಿಕೆಟ್ ದರವನ್ನು 10ರೂ.ಗಳಿಗೆ ಇಳಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿದೆ. ಪರಿಷ್ಕೃತ ದರ ನಿನ್ನೆಯಿಂದ ಜಾರಿಯಾಗಿದೆ. ಕೊರೊನಾ ಸಂದರ್ಭದಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕ ರೈಲುಗಳ ಹೆಸರನ್ನು ಎಕ್ಸ್‌ಪ್ರೆಸ್ ಸ್ಪೆಷಲ್, ಮೆಮು/ಡೆಮು ಎಕ್ಸ್‌ಪ್ರೆಸ್ ಎಂದು ಪರಿಷ್ಕರಿಸಿ ದರ ಹೆಚ್ಚಳ ಮಾಡಿತ್ತು.
ಆಗ ಪ್ರಯಾಣಿಕ ರೈಲುಗಳಿಗೆ ಕನಿಷ್ಠ10ರೂ. ಇದ್ದ ಟಿಕೆಟ್ ದರವನ್ನು 30ರೂ. ಏರಿಸಲಾಗಿತ್ತು. ಈಗ ಈ ರೈಲುಗಳ ಸೆಕೆಂಡ್ ಕ್ಲಾಸ್ ಸಾಮಾನ್ಯ ಟಿಕೆಟ್ ದರವನ್ನು ಈ ಮೊದಲಿನಂತೆ 10ರೂ.ಗೆ ಇಳಿಸಲಾಗಿದೆ.