ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಒಟ್ಟು 9,144 ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಟೆಕ್ನಿಷಿಯನ್ ಗ್ರೇಡ್–1’ (ಸಿಗ್ನಲ್) 1092 ಹಾಗೂ ‘ಟೆಕ್ನಿಷಿಯನ್ ಗ್ರೇಡ್–3’ 8052 ಹುದ್ದೆಗಳಿದ್ದು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು, ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು.
ಟೆಕ್ನಿಷಿಯನ್ ಗ್ರೇಡ್–1 ಹುದ್ದೆಗಳಿಗೆ ವಯೋಮಿತಿ ಕನಿಷ್ಠ 18ರಿಂದ 36, ಟೆಕ್ನಿಷಿಯನ್ ಗ್ರೇಡ್–3 ಹುದ್ದೆಗಳಿಗೆ ವಯೋಮಿತಿ ಕನಿಷ್ಠ 18ರಿಂದ 33 ಇದೆ. ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ನೇಮಕಾತಿ ಪ್ರಕ್ರಿಯೆಯು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ), ನಂತರ ದಾಖಲೆಗಳ ತಪಾಸಣೆ ಹಾಗೂ ಕೊನೆಯದಾಗಿ ಮೆಡಿಕಲ್ ಟೆಸ್ಟ್ ಇರಲಿದೆ.
ರೈಲ್ವೆ ನೇಮಕಾತಿ ಮಂಡಳಿಗಳಿಂದ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆಯಾ ರಾಜ್ಯಗಳ ಅಭ್ಯರ್ಥಿಗಳು ಸಂಬಂಧಿಸಿದ ರೈಲ್ವೆ ನೇಮಕಾತಿ ಮಂಡಳಿಯ ವೆಬ್ಸೈಟಿಗೆ ಹೋಗಿ (ಬೆಂಗಳೂರು–www.rrbbnc.gov.in) ಹುದ್ದೆಗಳ ವರ್ಗೀಕರಣ, ಪರೀಕ್ಷೆ ವಿಧಾನ, ಪರೀಕ್ಷೆ ಪಠ್ಯಕ್ರಮ, ಅರ್ಜಿ ಸಲ್ಲಿಕೆಗಾಗಿ ಹಾಗೂ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ವಿವರವಾದ ಅಧಿಸೂಚನೆ (ಸಿಇಎನ್) ನೋಡಿಕೊಂಡು ಅರ್ಜಿ ಸಲ್ಲಿಸಬೇಕು.