ದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಟಿಕೆಟ್ ಬುಕಿಂಗ್, ದೂರುಗಳು, PNR ಸ್ಥಿತಿ ಇತ್ಯಾದಿಗಳನ್ನು ‘ಸೂಪರ್ ಆಪ್’ ಎಂಬ ಒಂದೇ ಅಪ್ಲಿಕೇಶನ್ನಲ್ಲಿ ಮುಂದಿನ ದಿನಗಳಲ್ಲಿ ಪಡೆಯಬಹುದು.
ಇದಕ್ಕಾಗಿ ₹90 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ಸೌಲಭ್ಯ ಮುಂದಿನ 3 ವರ್ಷಗಳಲ್ಲಿ ಲಭ್ಯವಾಗಲಿದೆ. ಪ್ರಸ್ತುತ IRCTC ಪ್ರತಿನಿತ್ಯವೂ ನಿಧಾನವಾಗಿದ್ದರೂ ಮುಂಬರುವ ಹೊಸ ಅಪ್ಲಿಕೇಶನ್ ಸೂಪರ್ ಫಾಸ್ಟ್ ಆಗಿರಲಿದೆ ಎಂದು ಹೇಳಲಾಗುತ್ತಿದೆ.