ಬೆಂಗಳೂರು: ಕನ್ನಡಿಗರಿಗೆ ನೈರುತ್ಯ ರೈಲ್ವೆ ಇಲಾಖೆಯಿಂದ ಬಿಗ್ ಶಾಕ್ ಎದುರಾಗಿದೆ. ಇನ್ಮುಂದೆ ನೈರುತ್ಯ ರೈಲ್ವೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶ ನೀಡಿದ್ದು, ಕನ್ನಡಿಗರಿಗೆ ರೈಲ್ವೆ ಹುದ್ದೆಗಳು ಕೈತಪ್ಪುವಂತಾಗಿದೆ. ಬೆಂಗಳೂರು ವಿಭಾಗದ ನೈರುತ್ಯ ರೈಲ್ವೆ ಎಲೆಕ್ಟ್ರಿಕಲ್ ಸೆಕ್ಷನ್ ರೈಲ್ವೆ ಹುದ್ದೆ ಬಡ್ತಿ, ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಕರೆ ನೀಡಿದ್ದು, ಪರೀಕ್ಷೆಯು ಕೇವಲ ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಲಾಗಿದೆ. ಕನ್ನಡಿಗರಿಗೆ ಕನ್ನಡದಲ್ಲಿ ಬರೆಯಲು ಯಾವುದೇ ಆಯ್ಕೆ ನೀಡಲಾಗಿಲ್ಲ. ಈ ಕಾರಣದಿಂದಾಗಿ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ.
