ಬೆಂಗಳೂರು: ರೌಡಿಶೀಟರ್ನನ್ನು ಬರ್ಬರ ಹತ್ಯೆ ಮಾಡಿ ಆರು ದುಷ್ಕರ್ಮಿಗಳು ಪರಾರಿ ಆಗಿರುವಂತಹ ಘಟನೆ ಚುಂಚನಘಟ್ಟ ಮುಖ್ಯರಸ್ತೆಯಲ್ಲಿ ರಾತ್ರಿ 9.30ರ ಸುಮಾರಿಗೆ ನಡೆದಿದೆ.
ಕೋಣನಕುಂಟೆ ಠಾಣಾ ವ್ಯಾಪ್ತಿಯ ಸಹದೇವ್ ಮೃತ ರೌಡಿಶೀಟರ್. ಟೀ ಕುಡಿಯಲು ಬೇಕರಿ ಬಳಿ ಬಂದಿದ್ದಾಗ ಮೂರು ಬೈಕ್ಗಳಲ್ಲಿ ಬಂದಿದ್ದ 6 ದುಷ್ಕರ್ಮಿಗಳ ಗ್ಯಾಂಗ್ನಿಂದ ಸಹದೇವ್ ಮೇಲೆ ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.