ನವದೆಹಲಿ: ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ರೈಲುಗಳನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಯೋಜನೆಗೆ ‘ನಮೋ ಭಾರತ್ ಎಂದು ಹೆಸರಿಸಲಾಗಿದೆ. ಈ ರೈಲುಗಳು ದೆಹಲಿ-ಗಾಜಿಯಾಬಾದ್-ಮೀರತ್ ನಗರಗಳ ನಡುವೆ ತ್ವರಿತ ಸಂಚಾರ ಸೇವೆ ನೀಡಲಿವೆ. ಉದ್ಘಾಟನಾ ಕಾರ್ಯಕ್ರಮದ ಭಾಗವಾಗಿ, ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ ಸಂಪರ್ಕ ಕಲ್ಪಿಸುವ ರಾಪಿಡ್‌ಎಕ್ಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಉದ್ಘಾಟನೆಗೊಳ್ಳಲಿರುವ ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ನ 17 ಕಿಮೀ ಆದ್ಯತಾ ವಿಭಾಗವು ಸಾಹಿಬಾಬಾದ್‌ನಿಂದ ‘ದುಹೈ ಡಿಪೋ’ ಗೆ ಸಂಪರ್ಕ ಕಲ್ಪಿಸಲಿದೆ. ಕಾರ್ಯಕ್ರಮದ ನಂತರ, ಪ್ರಧಾನಿ ಮೋದಿ ಅವರು ಸಾಹಿಬಾಬಾದ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲಿ ಅವರು ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.