ನವದೆಹಲಿ: ಲಡಾಖ್ ಹಾಗೂ ಕಾಶ್ಮೀರದ ಕಿಸ್ತವಾರದಲ್ಲಿ ಇಂದು ಬೆಳಗ್ಗೆ ಭೂಕಂಪ ಸಂಭವಿಸಿದೆ. ಭೂಕಂಪನದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ ಅಳೆಯಲಾಗಿದ್ದು, 4.5 ತೀವ್ರತೆ ದಾಖಲಾಗಿದೆ.
ಕಾರ್ಗಿಲ್ ನ ಗಡಿಯಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿದೆ. ಬೆಳಗ್ಗೆ 4.33 ರ ಸುಮಾರಿಗೆ 5 ಕಿ.ಮೀ. ಆಳದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದೆ. ಇನ್ನು ಘಟನೆಯಲ್ಲಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಈ ಬಗ್ಗೆ ಮಾಹಿತಿ ನೀಡಿದ ಐಐಟಿ ಕಾನ್ಪುರದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರೊಫೆಸರ್ ಜಾವೇದ್ ಅವರು, ಹಿಮಾಲಯ ಶ್ರೇಣಿಯಲ್ಲಿನ ಟೆಕ್ಟೋನಿಕ್ ಪ್ಲೇಟ್ ಸ್ಥಿರವಾಗಿಲ್ಲ. ಇದರಿಂದಾಗಿ ಅಂತಹ ಭೂಕಂಪಗಳು ದೀರ್ಘ ಸಮಯದವರೆಗೆ ಸಂಭವಿಸುತ್ತಲೇ ಇರುತ್ತವೆ ಎಂದರು.