ಶ್ರೀನಗರ: ಆರು ಲಷ್ಕರ್-ಎ-ತೊಯ್ಬಾ ಉಗ್ರರ ಸಹಚರರನ್ನು ಬಂಧಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಮತ್ತು ಬುದ್ಗಾಮ್ ಜಿಲ್ಲೆಗಳಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾದ ಉರಿ ಪ್ರದೇಶದಲ್ಲಿ ಭಯೋತ್ಪಾದನಾ ಘಟಕವನ್ನು ಪತ್ತೆಹಚ್ಚಲಾಗಿದ್ದು ,ಎಲ್ಇಟಿ ಉಗ್ರರ ಮೂವರು ಸಹಚರರನ್ನು ಬಂಧಿಸಲಾಗಿದೆ.
ಇನ್ನು ಸುಳಿವಿನ ಮೇರೆಗೆ ಭದ್ರತಾ ಪಡೆಗಳು ಜಂಟಿ ಗಸ್ತು ತಿರುಗುತ್ತಿದ್ದ ವೇಳೆ ಓರ್ವ ಶಂಕಿತ ನನ್ನು ಬಂಧಿಸಿದರು. ಬಳಿಕ ಎರಡು ಗ್ರೆನೇಡ್‌ಗಳು, ಒಂದು ಚೈನೀಸ್ ಪಿಸ್ತೂಲ್, ಒಂದು ಪಿಸ್ತೂಲ್ ಮ್ಯಾಗಜೀನ್ ಮತ್ತು ನಾಲ್ಕು ಲೈವ್ ರೌಂಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.