ಬೈರುತ್: ಲೆಬನಾನಿನ ಬೈರುತ್‌ನ ಉಪನಗರಗಳು, ಸಿರಿಯಾದ ಕೆಲವು ಭಾಗಗಳಲ್ಲಿ ಮಂಗಳವಾರ ಪೇಜರ್‌ಗಳು ಸ್ಫೋಟಗೊಂಡ ನಂತರ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ.
ಸರಣಿ ಪೇಜರ್ ಸ್ಫೋಟದಲ್ಲಿ ಇರಾನ್‌ನ ರಾಯಭಾರಿ ಸೇರಿದಂತೆ ಸುಮಾರು 2,750 ಜನರು ಗಾಯಗೊಂಡಿದ್ದಾರೆ. ಅವರಲ್ಲಿ 200 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಘಟನೆಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಶಂಕಿಸಿರುವ ಹಿಜ್ಬುಲ್ಲಾ, ತನ್ನ ಹೇಳಿಕೆಯಲ್ಲಿ ಪ್ರತೀಕಾರದ ಸೂಚನೆ ನೀಡಿದೆ. ಬೈರುತ್‌ನಲ್ಲಿ ನಡೆದ ಪೇಜರ್ ಸ್ಫೋಟದಲ್ಲಿ ಲೆಬನಾನ್‌ನಲ್ಲಿನ ಇರಾನ್ ರಾಯಭಾರಿ ಮೊಜ್ತಾಬಾ ಅಮಾನಿ ಕೂಡ ಗಾಯಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ವೀಡಿಯೊಗಳು ಮತ್ತು ಫೋಟೋಗಳು ಗಾಯಗೊಂಡ ವ್ಯಕ್ತಿಗಳು ನೆಲದ ಮೇಲೆ ಕುಳಿತು ಅಥವಾ ಮಲಗಿರುವುದನ್ನು ತೋರಿಸಿವೆ. ಲೆಬನಾನ್‌ನ ಪೂರ್ವದಲ್ಲಿ ಹಿಜ್ಬುಲ್ಲಾ ಸದಸ್ಯನ 10 ವರ್ಷದ ಮಗಳು ಆಕೆಯ ತಂದೆಯ ಪೇಜರ್ ಸ್ಫೋಟಗೊಂಡಾಗ ಸಾವನ್ನಪ್ಪಿದ್ದಾಳೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ