ಬೈರೂತ್: ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಸತತ 24 ಗಂಟೆಗಳಿಂದ ನಡೆಸಿದ ವೈಮಾನಿಕ ದಾಳಿಯಲ್ಲಿ 35 ಮಕ್ಕಳು ಮತ್ತು 58 ಮಹಿಳೆಯರು ಸೇರಿ 492 ಜನರು ಮೃತಪಟ್ಟಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನು ಇಸ್ರೇಲ್ ಸೇನೆಯ ದಾಳಿಗೆ ಕಳೆದ ಒಂದು ವಾರದಲ್ಲಿ 1,645 ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಬೆಳಗಿನ ಜಾವದಿಂದ ಹಿಂಡಿದು ಮಂಗಳವಾರ ಬೆಳಗಿನ ಜಾವದವರೆಗೆ ಲೆಬನಾನ್ ದಕ್ಷಿಣ ಹಾಗೂ ಪೂರ್ವ ಪ್ರಾಂತ್ಯದಲ್ಲಿ ಬಂಡುಕೋರರ 300 ನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಯಿತು. ಇಸ್ರೇಲ್ ರಕ್ಷಣಾ ಪಡೆಯ ವಾಯುದಾಳಿಯಲ್ಲಿ 492 ಜನರು ಹತರಾಗಿದ್ದು, ನಾಗರಿಕರು ಸೇರಿದಂತೆ 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಪಡೆಯ ಮುಖ್ಯಸ್ಥರ ಆದೇಶದಂತೆ ಹೆಜ್ಬೊಲ್ಲಾನೆಲೆಗಳ ಮೇಲೆ ವಾಯು ಪಡೆ ವಿಮಾನಗಳು ಬಾಂಬ್ ದಾಳಿ ನಡೆಸಿವೆ. ಬಂಡುಕೋರರ ಅಡಗುತಾಣಗಳು, ಆಡಳಿತ ಕೇಂದ್ರಗಳು, ಸೇನಾ ನೆಲೆ, ಶಸ್ತ್ರಾಗಾರಗಳ ಮೇಲೆ ಬಾಂಬ್ ಸುರಿಮಳೆಗರೆಯಲಾಗಿದೆ. ಹೆಜ್ಬೊಲ್ಲಾಪಡೆ ಅಡಗಿದ್ದ ಸುರಂಗ ಮಾರ್ಗಗಳ ಮೇಲೂ ಏರ್‌ಸ್ಟ್ರೈಕ್ ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೊಂಡಿದೆ. ಕಳೆದ ಮಂಗಳವಾರ ಮತ್ತು ಬುಧವಾರ ಲೆಬನಾನ್‌ನಾದ್ಯಂತ ನಡೆದ ಪೇಜರ್ ಸ್ಫೋಟದಲ್ಲಿ 39 ಮಂದಿ ಬಲಿಯಾಗಿ, 3 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ