ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಸಂಸತ್ತಿನ ಅನರ್ಹತೆ ಆದೇಶ ರದ್ದಾಗಿದ್ದು, ಮರಳಿ ಸದಸ್ಯತ್ವ ಪಡೆದಿದ್ದಾರೆ. ಈ ಸಂಬಂಧ ಇಂದು (ಆಗಸ್ಟ್ 7) ಲೋಕಸಭಾ ಸಚಿವಾಲಯ ಅಧಿಸೂಚನೆ ಬಿಡುಗಡೆಗೊಳಿಸಿದೆ. ಇದೇ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಖಾತೆಯ ಬಯೊ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಂಡಿದ್ದಾರೆ.
ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ನಂತರ ಲೋಕಸಭಾ ಸ್ಥಾನದಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಇದಾದ ಬಳಿಕ ಟ್ವಿಟರ್‌ನ ಬಯೋದಲ್ಲಿ “DisQualified MP” ಎಂದು ನಮೂದಿಸದ್ದರು. ಈಗ ಅದನ್ನು Member of Parliament ಎಂದು ಬದಲಿಸಿದ್ದಾರೆ.
ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಲೋಕಸಭೆ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ್ದರು.