ದೆಹಲಿ: ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚದ ಮಿತಿ ಹೆಚ್ಚಿಸಲಾಗಿದೆ ಎಂದು ಭಾರತದ ಚುನಾವಣಾ ಆಯೋಗ (ECI) ಬಹಿರಂಗಪಡಿಸಿದೆ.
ಪ್ರತಿ ಅಭ್ಯರ್ಥಿ ಗರಿಷ್ಠ ₹95 ಲಕ್ಷ ಖರ್ಚು ಮಾಡಬಹುದು. ಪ್ರತಿ ಕ್ಷೇತ್ರದಲ್ಲಿ ಪ್ರಚಾರ ವಾಹನಗಳ ಸಂಖ್ಯೆ 5-13ಕ್ಕೆ ಹೆಚ್ಚಿಸಲಾಗಿದೆ.
ನಾಮಪತ್ರ ಸಲ್ಲಿಸಲು SC/ST ಅಭ್ಯರ್ಥಿಗಳು ₹12,500 ಮತ್ತು ಇತರರು ₹25,000 ಠೇವಣಿ ಪಾವತಿಸಬೇಕು. ಪ್ರಣಾಳಿಕೆ ಪ್ರತಿಗಳನ್ನು ECIಗೆ ಪ್ರಾದೇಶಿಕ ಭಾಷೆಯಲ್ಲಿ ಹಾಗೂ ಹಿಂದಿ & ಇಂಗ್ಲಿಷ್‌ನಲ್ಲಿ ಸಲ್ಲಿಸಬೇಕು ಎಂದು ಹೇಳಿದೆ.