ಲೋಕೋ ಪೈಲೆಟ್ ಮೊಬೈಲ್‌ನಲ್ಲಿ ಕ್ರಿಕೆಟ್ ಪಂದ್ಯಾಟ ನೋಡಿದ್ದೆ ರೈಲು ಅಪಘಾತಕ್ಕೆ ಕಾರಣ: ಅಶ್ವಿ‌ನಿ ವೈಷ್ಣವ್‌

ನವದೆಹಲಿ: ಕಳೆದ ವರ್ಷದ ಅ.29ರಂದು ಆಂಧ್ರಪ್ರದೇಶದಲ್ಲಿ ನಡೆದ 14 ಪ್ರಯಾಣಿಕರ ಸಾವಿಗೆ ಕಾರಣವಾದ ಎರಡು ಪ್ಯಾಸೆಂಜರ್ ರೈಲುಗಳಲ್ಲಿ ಅಪಘಾತದಲ್ಲಿ ಒಂದು ರೈಲಿನ ಚಾಲಕ ಮತ್ತು ಸಹಾಯಕ ಚಾಲಕ ಫೋನ್‌ನಲ್ಲಿ ಮೊಬೈಲ್‌ನಲ್ಲಿ ಕ್ರಿಕಟ್‌ ಪಂದ್ಯ ವೀಕ್ಷಿಸಿದ್ದೇ ಕಾರಣ ಎಂದು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ.

ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿಯಲ್ಲಿ ಹೌರಾ-ಚೆನ್ನೈ ನಡುವಿನ ಮಾರ್ಗದಲ್ಲಿ ವಿಶಾಖಪಟ್ಟಣದಲ್ಲಿ ಪಲಾಸ ರೈಲಿಗೆ ಹಿಂದಿನಿಂದ ರಾಯಗಢ ಪ್ಯಾಸೆಂಜರ್‌ ರೈಲು ಢಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 14 ಪ್ರಯಾಣಿಕರು ಮೃತಪಟ್ಟು, 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.

ಭಾರತೀಯ ರೈಲ್ವೇಯ ಹೊಸ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುತ್ತಿರುವಾಗ, ವೈಷ್ಣವ್ ಅವರು ಆಂಧ್ರ ರೈಲು ಅಪಘಾತವನ್ನು ಉಲ್ಲೇಖಿಸಿದ್ದಾರೆ ಮಾತ್ರವಲ್ಲದೇ ಭವಿಷ್ಯದಲ್ಲಿ ಈ ರೀತಿಯ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದು, ಈ ನಿಟ್ಟಿನಲ್ಲಿ ನೂತನ ಸುರಕ್ಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Advertisement

ನಾವು ಸುರಕ್ಷತೆಯತ್ತ ಹೆಚ್ಚಿನ ಗಮನ ಹರಿಸುತ್ತಿದ್ದು, ಪ್ರತಿ ಘಟನೆಯ ಮೂಲ ಕಾರಣವನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತೇವೆ ಮತ್ತು ಅದು ಪುನರಾವರ್ತನೆಯಾಗದಂತೆ ನಾವು ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ವೈಷ್ಣವ್ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement