ನವದೆಹಲಿ: ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಇತರೆ ಕಂಪ್ಯೂಟರ್‌ಗಳ ಆಮದು ಮೇಲಿನ ನಿರ್ಬಂಧದ ಆದೇಶದ ಅನುಷ್ಠಾನವನ್ನು ಕೇಂದ್ರ ಸರ್ಕಾರ ಅಕ್ಟೋಬರ್ 31ರವರೆಗೆ ಮುಂದೂಡಿದೆ. ಸುಮಾರು 3 ತಿಂಗಳ ಮಟ್ಟಿಗೆ ವಿಸ್ತರಿಸಿದೆ.
ಈ ಅವಧಿಯಲ್ಲಿ ಕಂಪನಿಗಳು ಪರವಾನಗಿ ಇಲ್ಲದೆಯೂ ಈ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಮದು ಮಾಡಿಕೊಳ್ಳಬಹುದು. ಇನ್ನೊಂದಡೆ, ಪರವಾನಗಿ ಪಡೆಯಲು ಕಂಪನಿಗಳಿಗೆ 3 ತಿಂಗಳ ಕಾಲಾವಕಾಶವೂ ಸಿಗಲಿದೆ. ಹೀಗಾಗಿ ಕಂಪನಿಗಳು ಕೊಂಚ ನಿರಾಳತೆ ಹೊಂದಬಹುದಾಗಿದೆ.
ನವೆಂಬರ್ 1ರಿಂದ ಈ ಸಾಧನಗಳನ್ನು ಆಮದು ಮಾಡಿಕೊಳ್ಳಲು ಪರವಾನಗಿ ಕಡ್ಡಾಯವಾಗಿದೆ. ಆ.3ರಂದು ತಕ್ಷಣದಿಂದಲೇ ಜಾರಿಯಾಗುವಂತೆ ಕೇಂದ್ರ ಸರ್ಕಾರವು ಈ ಎಲೆಕ್ಟ್ರಾನಿಕ್ ಉಪಕರಣಗಳ ಆಮದಿಗೆ ಪರವಾನಗಿಯನ್ನು ಕಡ್ಡಾಯಗೊಳಿಸಿತ್ತು. ಆದರೆ ಕಂಪನಿಗಳ ಮನವಿ ಮೇರೆಗೆ ಇದೀಗ ಈ ಅವಧಿಯನ್ನು ಕೆಂದ್ರ ಸರ್ಕಾರ ವಿಸ್ತರಿಸಿದೆ.