ಬೆಂಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀಯ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ, ತಲೆಮರೆಸಿಕೊಂಡಿದ್ದಾರೆ. ಹೀಗಾಗಿ, ಕಾರು ಚಾಲಕನ ವಿಚಾರಣೆ ನಡೆಸಿದರೆ ಶ್ರೀಗಳ ಸುಳಿವು ಪತ್ತೆಯಾಗಬಹುದು ಎಂದು ಸಿಸಿಬಿ ಕಚೇರಿಗೆ ಚಾಲಕನನ್ನು ಸಿಸಿಬಿ ಕಚೇರಿಗೆ ಕರೆ ತಂದಿದ್ದಾರೆ. ಈ ಪ್ರಕರಣದಲ್ಲಿ ಸ್ವಾಮೀಜಿ ಎ3 ಆರೋಪಿಯಾಗಿದ್ದಾರೆ.
ಸ್ವಾಮೀಜಿ ಇತ್ತೀಚೆಗೆ ಖರೀದಿಸಿದ ಇನ್ನೋವಾ ಕಾರು, 8 ಎಕರೆ ಜಮೀನು, ನಿವೇಶನ ಹಾಗೂ ಹೊಸ ಪೆಟ್ರೋಲ್ ಬಂಕ್‌ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿವೆ.ಚೈತ್ರಾ ಕುಂದಾಪುರರೊಂದಿಗೆ ಸೇರಿ ನಡೆಸಿದ ವಂಚನೆ ದುಡ್ಡಿನಿಂದ ಸ್ವಾಮೀಜಿ ಈ ಎಲ್ಲ ಆಸ್ತಿಗಳನ್ನು ಖರೀದಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.