ಸೂರತ್: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆ ದೇಶದೆಲ್ಲೆಡೆ ರಾಮ ಭಕ್ತರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇದೇ ರೀತಿ ರಾಮ ಭಕ್ತರೊಬ್ಬರು ವಜ್ರದ ಹಾರದಲ್ಲಿ ರಾಮ ಮಂದಿರವನ್ನು ತಯಾರಿಸಿದ್ದಾರೆ.
ಗುಜರಾತ್ ಸೂರತ್ ನ ವಜ್ರದ ವ್ಯಾಪಾರಿಯೊಬ್ಬರು 5,000 ವಜ್ರಗಳನ್ನು ಬಳಸಿಕೊಂಡು ರಾಮ ಮಂದಿರದ ಪರಿಕಲ್ಪನೆಯನ್ನು ತಯಾರಿಸಿದ್ದಾರೆ. ತಯಾರಾದ ರಾಮ ಮಂದಿರ ಹಾರದಲ್ಲಿ ಅಮೆರಿಕ ವಜ್ರಗಳನ್ನು ಬಳಸಲಾಗಿದೆ. ಇನ್ನು ಈ ಹಾರದಲ್ಲಿ ವಜ್ರದ ಜೊತೆಗೆ 2 ಕೆ.ಜಿ. ಬೆಳ್ಳಿಯನ್ನು ಸಹ ಬಳಕೆ ಮಾಡಲಾಗಿದೆ. 35 ದಿನಗಳಲ್ಲಿ 40 ಕುಶಲಕರ್ಮಿಗಳು ವಜ್ರದ ಹಾರವನ್ನು ತಯಾರು ಮಾಡಿದ್ದಾರೆ.
ಈ ಹಾರವು ಯಾವುದೇ ವಾಣಿಜ್ಯ ದೃಷ್ಟಿಯಿಂದ ತಯಾರು ಮಾಡಿಲ್ಲ. ನಾವು ರಾಮ ಮಂದಿರಕ್ಕೆ ಉಡುಗೊರೆಯಾಗಿ ನೀಡುವ ಸಲುವಾಗಿ ತಯಾರಿಸಿದ್ದೇವೆ’. ಎಂದು ವ್ಯಾಪಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.