ವಯನಾಡ್ ಭೂಕುಸಿತದ ನಂತರ ದಟ್ಟ ಅರಣ್ಯದಲ್ಲಿ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ ಬುಡಕಟ್ಟು ಸಮುದಾಯಕ್ಕೆ ಸೇರಿದ ನಾಲ್ವರು ಮಕ್ಕಳು ಹಾಗೂ ಅವರ
ಪೋಷಕರನ್ನು ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಕಲ್ಪೆಟ್ಟಾ ವ್ಯಾಪ್ತಿಯ ಅರಣ್ಯಾಧಿಕಾರಿ ಕೆ.ಹಶಿಸ್ ನೇತೃತ್ವದ ನಾಲ್ವರು ಸದಸ್ಯರ ತಂಡವು 1-4 ವರ್ಷದೊಳಗಿನ ನಾಲ್ಕು ಮಕ್ಕಳನ್ನು ಒಳಗೊಂಡ ಬುಡಕಟ್ಟು ಕುಟುಂಬವನ್ನು ರಕ್ಷಿಸಿದೆ.
ಈ ಕುಟುಂಬವು ವಯನಾಡಿನ ಪನಿಯಾ ಸಮುದಾಯದ್ದಾಗಿದ್ದು, ಬೆಟ್ಟದ ಮೇಲಿನ ಗುಹೆಯೊಂದರಲ್ಲಿ 5 ದಿನದಿಂದ ಆಹಾರವಿಲ್ಲದೆ ಸಿಕ್ಕಿ ಹಾಕಿಕೊಂಡಿದ್ದರು ಎಂದು ಹಶಿಸ್ ತಿಳಿಸಿದ್ದಾರೆ.