ವರದಕ್ಷಿಣೆ ದಾಹಕ್ಕೆ ಬಲಿಯಾದರೆ ಯುವ ವ್ಯದ್ಯೆ ?

ತಿರುವನಂತಪುರಂ: ವರದಕ್ಷಿಣೆ ಕಾರಣಕ್ಕಾಗಿ ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಯುವ ವೈದ್ಯೆ ಆತ್ಮಹತ್ಯೆ ಪ್ರಕರಣ ಕೇರಳದಲ್ಲಿ ಸಂಚಲಸ ಸೃಷ್ಟಿಸಿದ್ದು, ಈ ಹಿನ್ನಲೆಯಲ್ಲಿ ಪ್ರಕರಣದ ಸಮಗ್ರ ತನಿಖೆಗೆ ಆರೋಗ್ಯ ಸಚಿವರು ಆದೇಶ ನೀಡಿದ್ದಾರೆ.

ತಿರುವನಂತಪುರಂ ವೆಂಜರಮೂಡ್ ಮೂಲದ ಡಾ. ಶಹನಾ (26) ಆತ್ಮಹತ್ಯೆ ಮಾಡಿಕೊಂಡ ವ್ಯದ್ಯೆ.

ಮೃತ ಯುವತಿ ಡಿ. ೪ ರಂದು ರಾತ್ರಿ ತನ್ನ ಕರ್ತವ್ಯಕ್ಕೆ ಹಾಜರಾಗಾದೆ ಮರುದಿನ ಬೆಳಗ್ಗೆ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆ ಮಾಡುವ ಮೊದಲು ಪ್ರತ ಬರೆದಿದ್ದು, ಅ ಪತ್ರದಲ್ಲಿ ಹಲವು ವಿಚಾರ ಉಲ್ಲೆಂಘವಾಗಿದ್ದು, ‘ಎಲ್ಲರಿಗೂ ಹಣ ಬೇಕು, ಎಲ್ಲಕ್ಕಿಂತ ಹಣವೇ ಶ್ರೇಷ್ಠ ‘ ಎಂದು ಟಿಪ್ಪಣಿಯಲ್ಲಿ ಬರೆಯಲಾಗಿದೆ.

Advertisement

ಘಟನೆ ವಿವರ:

ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಓದುತ್ತಿದ್ದ ಡಾ. ರುವೈಸ್ ಹಾಗೂ ಡಾ. ಶಹನಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಇವರಿಬ್ಬರ ಮನೆಯವರು ಮದುವೆಯ ವಿಚಾರವಾಗಿ ಮಾತುಕತೆ ನಡೆಸಿದ್ದರು. ವಿವಾಹ ಪ್ರಸ್ತಾಪದ ವೇಳೆ ಡಾ. ರುವೈಸ್ ಮನೆಯರು 150 ಪವನ್ ಚಿನ್ನ , ಬಿಎಂಡಬ್ಲ್ಯು ಕಾರು ಹಾಗೂ ಜಮೀನು ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಯುವತಿ ಮನೆಯವರು 50 ಲಕ್ಷ ಹಣ , 50 ಪವನ್ ಚಿನ್ನ ಮತ್ತು ಕಾರು ನೀಡುವುದಾಗಿ ಹೇಳಿದ್ದು, ಆದರೆ ಇದಕ್ಕೆ ವರನ ಮನೆಯವರು ಒಪ್ಪಿಗೆ ನೀಡಿರಲಿಲ್ಲ.

ಈ ಹಂತದಲ್ಲಿ ಮದುವೆ ಮುರಿದು ಬಿದ್ದಿದ್ದು, ಇದರಿಂದ ಮನನೊಂದ ಶಹಾನಾ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಆರೋಪವನ್ನು ಡಾ. ರುವೈಸ್ ತಳ್ಳಿ ಹಾಕಿದ್ದಾರೆ.

ಈ ಪ್ರಕರಣದಲ್ಲಿ ವರದಕ್ಷಿಣೆಯ ನೇರ ಉಲ್ಲೇಖವಿಲ್ಲದ ಕಾರಣ, ಪೊಲೀಸರು ಆರಂಭದಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ. ಆದರೆ ಈ ವಿಚಾರ ಕೇರಳದಲ್ಲಿ ತಲ್ಲಣ ಸೃಷ್ಟಿಸಿರುವಂತೆ ಈ ಬಗ್ಗೆ ಸಮಗ್ರ ತನಿಖೆಗೆ ಪೊಲೀಸರು ಆರೋಗ್ಯ ಸಚಿವರು ಆದೇಶ ಹೊರಡಿಸಿದ್ದಾರೆ. ಈ ನಡುವೆ ಕೇರಳ ಮಹಿಳಾ ಆಯೋಗವು ಶಹನ ತಾಯಿಯನ್ನು ಭೇಟಿಯಾಗಿದ್ದು, ಈ ವೇಳೆ ಮುರಿದ ಮದುವೆ ಪ್ರಸ್ತಾಪದಿಂದ ಮಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಮಗಳ ಆತ್ಮಹತ್ಯೆಗೆ ಡಾ. ರುವೈಸ್ ಹಾಗೂ ಅವರ ಕುಟುಂಬದವರ ಪಾತ್ರ ಇರುವುದಾಗಿ ದೂರಿಕೊಂಡಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement