ಐಟಿ ನಿಯಮ ಪಾಲಿಸದ ವಾಟ್ಸಾಪ್ ಕಾರ್ಯಾಚರಣೆ ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಜೂನ್ 2021ರಲ್ಲಿ ಕೇರಳ ಹೈಕೋರ್ಟ್ ಪಿಐಎಲ್ ಅನ್ನು ‘ಅಕಾಲಿಕ’ ಎಂದು ಘೋಷಿಸಿ ವಜಾಗೊಳಿಸಿದ್ದ ಹಿನ್ನೆಲೆಯಲ್ಲಿ ಓಮನ್ ಕುಟ್ಟನ್ ಸುಪ್ರೀಂಕೋರ್ಟ್ ಕದ ತಟ್ಟಿದ್ದರು.
ಇದೀಗ ಸರ್ವೋಚ್ಛ ನ್ಯಾಯಾಲಯ ವಾಟ್ಸಾಪ್ ನಿಷೇಧ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ