ಡಾಕಾ: ಬೈಲಿ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 44 ಜನರನ್ನು ಬಲಿ ಆಗಿದ್ದಾರೆ. ಮತ್ತು 20 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಅಗ್ನಿಶಾಮಕ ದಳದವರು ಅಪಾಯಕಾರಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡರು, ಏಳು ಅಂತಸ್ತಿನ ಗ್ರೀನ್ ಕೋಜಿ ಕಾಟೇಜ್‌ನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ 42 ಜನ ಸೇರಿದಂತೆ 70 ವ್ಯಕ್ತಿಗಳನ್ನು ರಕ್ಷಿಸಿದರು.