ಜಾಜ್ಪುರ : ವಾಮಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ದಂಪತಿಯ ಮೇಲೆ ಹಲ್ಲೆ ನಡೆಸಿ ಮನೆಗೆ ಬೆಂಕಿ ಇಟ್ಟು ಸುಟ್ಟು ಕೊಲೆ ಮಾಡಿದ್ದ 17 ಜನ ಆರೋಪಿಗಳಿಗೆ ಒಡಿಶಾದ ಜಾಜ್‌ಪುರ ಜಿಲ್ಲೆಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಘೋಷಿಸಿದ ನಂತರ, ಜಾಜ್‍ಪುರ ರಸ್ತೆಯ ಹೆಚ್ಚುವರಿ ಜಿಲ್ಲೆ ಮತ್ತು ಸೆಷನ್ಸ್ ನ್ಯಾಯಾೀಧಿಶ ಹೃಶಿಕೇಶ್ ಆಚಾರ್ಯ ಅವರು 17 ಜನರಿಗೆ ತಲಾ 10,000 ರೂ. ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಮೂರು ವರ್ಷಗಳ ಹಿಂದೆ ಈ ಘಟನೆ ನಡೆದಿತ್ತು. ಜುಲೈ 7, 2020 ರ ತಡರಾತ್ರಿಯಲ್ಲಿ ಕಳಿಂಗ ನಗರ ಪ್ರದೇಶದ ನಿಮಾಪಾಲಿ ಗ್ರಾಮದಲ್ಲಿ ಶೈಲಾ ಬಲ್ಮುಜ್ ಮತ್ತು ಸಾಂಬಾರಿ ಬಲ್ಮುಜ್ ಎಂಬ ದಂಪತಿ ಮನೆಗೆ ನುಗ್ಗಿದ್ದ ಆರೋಪಿಗಳು ವಾಮಾಚಾರದ ಅನುಮಾನದ ಮೇಲೆ ಅವರ ಮೇಲೆ ಹಲ್ಲೆ ನಡೆಸಿದ್ದರು. ನಂತರ ದಂಪತಿಯ ಮನೆಗೆ ಬೆಂಕಿ ಹಚ್ಚಿ ಸಜೀವವಾಗಿ ಸುಟ್ಟು ಹಾಕಿದ್ದರು.