ವಾಯುಸೇನೆ ಬತ್ತಳಿಕೆಗೆ ಮೊದಲ C-295 ಸಾಗಣೆ ವಿಮಾನ

ನವದೆಹಲಿ: ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಸ್ಪೇನ್‌ನ ಸೆವಿಲ್ಲೆಯಲ್ಲಿ ಏರ್‌ಬಸ್ ಡಿಫೆನ್ಸ್ ತಯಾರಿಸಿದ ಸಿ-295 ಸಾಗಣೆ ವಿಮಾನವನ್ನು ಸ್ವೀಕರಿಸಲು ಇಂದು ಸ್ಪೇನ್‌ಗೆ ತೆರಳಲಿದ್ದಾರೆ.

ಈ ಬಗ್ಗೆ ಐಎಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಇದರಲ್ಲಿ, 73 ಸೈನಿಕರು, 48 ಪ್ಯಾರಾಟ್ರೂಪರ್‌, 12 ಸ್ಟ್ರೆಚರ್ ಇಂಟೆನ್ಸಿವ್ ಕೇರ್ ಮೆಡಿವಾಕ್, 27 ಸ್ಟ್ರೆಚರ್ ಮೆಡಿವಾಕ್ ಮತ್ತು 4 ವೈದ್ಯಕೀಯ ಅಟೆಂಡೆಂಟ್‌ಗಳು ಒಟ್ಟಿಗೆ ಪ್ರಯಾಣಿಸಬಹುದು. ಇದು 9250 ಕೆಜಿ ತೂಕ ಹೊತ್ತು ಹಾರುವ ಸಾಮರ್ಥ್ಯ ಹೊಂದಿದ್ದು ಸಣ್ಣ ಏರ್‌ಸ್ಟ್ರಿಪ್‌ಗಳಲ್ಲಿಯೂ ಇಳಿಯಬಹುದು.

C-295 ಸಾರಿಗೆ ವಿಮಾನವು ಕೆಲವು ವಾರಗಳ ನಂತರ ಭಾರತಕ್ಕೆ ಬಂದಿಳಿದ್ದು, ಅಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್‌ಗೆ ಔಪಚಾರಿಕವಾಗಿ ಸೇರ್ಪಡೆಗೊಳಿಸುತ್ತಾರೆ. 2021 ರಲ್ಲಿ, ಭಾರತವು ಭಾರತೀಯ ವಾಯುಪಡೆಗೆ 56 C-295 ವಿಮಾನಗಳನ್ನು ತಲುಪಿಸಲು ಏರ್‌ಬಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement