ಪ್ರಧಾನಿ ಮೋದಿ ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಮೋದಿ ವಿರುದ್ಧ ತೃತೀಯ ಲಿಂಗಿ ಹಿಮಾಂಗಿ ಸಖಿ ಅವರನ್ನು ಚುನಾವಣಾ ಕದನದಲ್ಲಿ ಕಣಕ್ಕಿಳಿಸಲಾಗಿದೆ.
ಅಖಿಲ ಭಾರತ ಹಿಂದೂ ಮಹಾಸಭಾ ಅವರಿಗೆ ಚುನಾವಣಾ ಟಿಕೆಟ್ ನೀಡಿದೆ. 5 ಭಾಷೆಗಳಲ್ಲಿ ಭಗವತ್ ಕಥಾವನ್ನು ಹೇಳುವ ಹಿಮಾಂಗಿ ಏಪ್ರಿಲ್ 10 ರೊಳಗೆ ವಾರಾಣಸಿಗೆ ಬರಲಿದ್ದಾರೆ.
ಅವರೇ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ರಿಷಿ ಕುಮಾರ್ ತ್ರಿವೇದಿ ನಿನ್ನೆ ಉತ್ತರ ಪ್ರದೇಶದ 20 ಲೋಕಸಭಾ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.