ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ ಪ್ರಕರಣದ ಪ್ರಮುಖ ಆರೋಪಿಗಳು ಇಂದು ಜೈಲಿಗೆ ತೆರಳಿದ್ದಾರೆ. ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್, ಪದ್ಮನಾಭ ಹಾಗೂ ಪರಶುರಾಮ್ ಜೈಲಿಗೆ ಹೋಗಿದ್ದಾರೆ. ವಿಚಾರಣೆ ಬಾಕಿ ಹಿನ್ನೆಲೆ ಈ ಆರೋಪಿಗಳನ್ನು ಎಸ್ಐಟಿ ಅಧಿಕಾರಿಗಳು ಜೈಲಿನಿಂದ ಕಸ್ಟಡಿಗೆ ಪಡೆದಿದ್ದರು. ವಿಚಾರಣೆ ಮುಗಿದ ಹಿನ್ನಲೆ ನಾಲ್ವರನ್ನು ಎಸ್ಐಟಿ ಅಧಿಕಾರಿಗಳು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸತ್ಯನಾರಾಯಣ ವರ್ಮಾ ಹಾಗೂ ಸತ್ಯನಾರಾಯಣ ಹಿಟ್ಕಾರಿ ಅವರ ವಿಚಾರಣೆ ಬಾಕಿ ಇರುವ ಹಿನ್ನೆಲೆ ಇವರಿಬ್ಬರನ್ನು ಎಸ್ಐಟಿ ಅಧಿಕಾರಿಗಳು ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ.
