ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ವೇಳೆ ವಶಕ್ಕೆ ಪಡೆದಿರುವ ಹಣದ ಬಗ್ಗೆಯೂ ವಿವರಿಸಿದ್ದಾರೆ. ನಮ್ಮ ಎಸ್.ಐ.ಟಿ.ಯು ಇದುವರೆಗೆ ಮುಟ್ಟು ಗೋಲು ಹಾಕಿಕೊಂಡಿರುವ ಮೊತ್ತ ವಶಪಡಿಸಿಕೊಂಡ ಮೊತ್ತ (ರೂ.) ವಶಪಡಿಸಿಕೊಂಡ ವಿವರ: 1) 14/2024 8,21,62,600 ಸತ್ಯನಾರಾಯಣ ವರ್ಮಾ 2) 16/2024 3,62,47,200 ಪದ್ಮನಾಭ ಜೆ.ಜಿ. 3) 17/2024 30,00,000 ಪದ್ಮನಾಭ ಜೆ.ಜಿ. 4) 18/2024 1,49,65,200 ನಾಗೇಶ್ವರ ರಾವ್ 5) 20/2024 30,00,000 ಚಂದ್ರಮೋಹನ್ 6) 26/2024 12,50,000 ಜಿ.ಕೆ. ಜಗದೀಶ್ 7) 27/2024 3,10,000 ಸತ್ಯನಾರಾಯಣ ವರ್ಮಾ 8) 28/2024 24,00,000 ಸತ್ಯನಾರಾಯಣ ವರ್ಮಾ ಒಟ್ಟು ನಗದು 14,33,35,000 9) 207 ಗ್ರಾಂ ಚಿನ್ನ 13,50,000 ಚಂದ್ರಮೋಹನ್ 10) 47.6 ಗ್ರಾಂ ಚಿನ್ನ 3,09,400 ಜಿ.ಕೆ. ಜಗದೀಶ್ ಒಟ್ಟು ನಗದು 14,49,94,400 11) ವಿವಿಧ 217 ಬ್ಯಾಂಕ್ ಅಕೌಂಟ್ ಗಳನ್ನು ಗುರುತಿಸಿ ಅವುಗಳಲ್ಲಿದ್ದ 13,72,94,132 ರೂ.ಗಳನ್ನು ಫ್ರೀಜ್ ಮಾಡಲಾಗಿರುತ್ತದೆ. 12) ಈ ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯನಾರಾಯಣ ವರ್ಮಾ ಮತ್ತು ಇತರೆ ಆರೋಪಿಗಳು ಅಕ್ರಮವಾಗಿ ಬೇರೆ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿದ್ದ 1.50 ಕೋಟಿ ರೂ. ಹಣವನ್ನು ಜನರೇ ವಾಪಾಸ್ ಕಟ್ಟಿದ್ದಾರೆ. ಆ ಹಣ ಕೂಡ ಸರ್ಕಾರದಲ್ಲಿದೆ. 1,50,00,000 13) ಎಸ್.ಐ.ಟಿ. ಯು ಸತ್ಯನಾರಾಯಣ ವರ್ಮಾ ಲ್ಯಾಂಬೋರ್ಗಿನಿ ಉರಸ್ ಎಂಬ ಕಾರ್‌ನ್ನು ಬಿಗ್‌ಬಾಯ್ಸ್ ಟಾಯ್ಸ್ ಲಿ. ಕಂಪನಿ ಮೂಲಕ ಖರೀದಿ ಮಾಡಿದ್ದ. ಈಗ ಆ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಕಂಪನಿಯು ಕಾರನ್ನು ವಾಪಸ್ ಪಡೆದು 3,31,19,166 ರೂ. ಹಣವನ್ನು ಸರ್ಕಾರಕ್ಕೆ ಮರಳಿಸುವುದಾಗಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. 3,31,19,166 ವಶಪಡಿಸಿಕೊಂಡ ಮೊತ್ತ (ರೂ.) ವಶಪಡಿಸಿಕೊಂಡ ವಿವರ 14) ಇದೇ ಸತ್ಯನಾರಾಯಣ ವರ್ಮಾ 1.21 ಕೋಟಿಗೂ ಹೆಚ್ಚು ಬೆಲೆಬಾಳುವ ಬೆಂಜ್ ಕಾರನ್ನು ಖರೀದಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಕಾರನ್ನು ಎಸ್.ಐ.ಟಿ.ಯು ತನ್ನ ವಶಕ್ಕೆ ಪಡೆದಿರುತ್ತದೆ. ಈ ಕಾರನ್ನೂ ಸಹ ಮರಳಿ ಕಂಪನಿಗೆ ನೀಡಿ ಅದರ ಮೌಲ್ಯವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ 1,21,00,000 . 15) ದಿನಾಂಕ:23.05.2024 ರಂದು ಅಕ್ರಮವಾಗಿ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ[ ರತ್ನಾಕರ್ ಬ್ಯಾಂಕ್] ಎಸ್.ಟಿ. ನಿಗಮದ ಖಾತೆಗೆ 5.00 ಕೋಟಿ ಮರಳಿಸಿರುತ್ತಾರೆ. 5,00,00,000 16) ಯೂನಿಯನ್ ಬ್ಯಾಂಕ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 46.00 ಕೋಟಿಗೂ ಹೆಚ್ಚು ಹಣ ರತ್ನಾಕರ್ ಬ್ಯಾಂಕ್ ಲಿ. ನಲ್ಲಿದೆ. ಈ ಹಣವನ್ನು ನಮ್ಮ ಎಸ್.ಐ.ಟಿ. ತಂಡವು ಫ್ರೀಜ್ ಮಾಡಿರುತ್ತದೆ. ಅದನ್ನು ಹಿಂಪಡೆಯುವ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ. 46,00,00,000 ಒಟ್ಟು 85,25,07,698