ಹೊಸಪೇಟೆ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ವಿಕಲಚೇತನರಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಇನ್ ಕೈಂಡ್ ಯೋಜನೆಯಡಿ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್ ಯೋಜನೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ಮತ್ತು ಸಾಧನ ಸಲಕರಣೆಗಳು, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆಯಂತ್ರ ಯೋಜನೆ ಹಾಗೂ ದೃಷ್ಠಿ ದೋಷ ಹೊಂದಿರುವ ವಿಕಲಚೇತನರಿಗೆ ಬ್ರೆöÊಲ್ ಕಿಟ್ ನೀಡಲಾಗುವುದು.
ಅರ್ಹ ವಿಕಲಚೇತನರು ಸೇವಾಸಿಂಧು, ಗ್ರಾಮ-ಒನ್ ಮತ್ತು ಕರ್ನಾಟಕ-ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ https://sevasindhu.karnataka.gov.in/sevasindhu/kannada ಜ.30ರೊಳಗೆ ಅರ್ಜಿ ಸಲ್ಲಿಸಿ ಸ್ವೀಕೃತಿಯೊಂದಿಗೆ ಹಾರ್ಡ್ ಪ್ರತಿಯನ್ನು ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡಬ್ಲ್ಯೂ) ಗಳಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ತಾಲ್ಲೂಕು ಪಂಚಾಯತಿ ಆವರಣ, ಸಂಡೂರು ರಸ್ತೆ, ಹೊಸಪೇಟೆ ಅಥವಾ ಜಿಲ್ಲೆಯ ಆಯಾ ತಾಲ್ಲೂಕಿನ ಎಂ.ಆರ್.ಡಬ್ಲ್ಯೂ ಹೊಸಪೇಟೆ ಮೊ.9945252991, ಹಗರಿಬೊಮ್ಮನಹಳ್ಳಿ ಮೊ.9741185924, ಕೂಡ್ಲಿಗಿ ಮೊ.8217626361, ಹಡಗಲಿ ಮೊ.9900890403, ಕೊಟ್ಟೂರು ಮೊ.7353974518, ಹರಪನಹಳ್ಳಿ ಮೊ.9901182525 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೃಷ್ಣಾಸಾ ಬಾಕಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.