ವಿಜನ್ ಇಂಟರ್ ನ್ಯಾಷನಲ್ ಸ್ಕೂಲ್ ಮಾನ್ಯತೆ ಹಿಂಪಡೆತ.!

 

ದಾವಣಗೆರೆ : ಎಂಪವರ್ ಎಜುಕೇಷನ್(ರಿ) ದಾವಣಗೆರೆ ಇವರ ಆಶ್ರಯದಲ್ಲಿನ ವಿಜನ್ ಇಂಟರ್ ನ್ಯಾಷನಲ್ ಸ್ಕೂಲ್, ಸವಣೂರು ಪ್ಲಾಜಾ ಹತ್ತಿರ, ಪಿ.ಬಿ.ರಸ್ತೆ, ದಾವಣಗೆರೆ. ಉತ್ತರವಲಯ ಈ ಪೂರ್ವ ಪ್ರಾಥಮಿಕ ಶಾಲೆಯ ಮಾನ್ಯತೆಯನ್ನು ಹಿಂಪಡೆಯಲಾಗಿದೆ.

ಈ ಶಾಲೆಯು ಇಲಾಖೆಯಿಂದ ಅನುಮತಿ ಪಡೆದ ಸ್ಥಳದಲ್ಲಿ ನಡೆಸದೇ ಅನಧೀಕೃತವಾಗಿ ಬೇರೆ ಸ್ಥಳದಲ್ಲಿ ನಡೆಸುತ್ತಿರುವ ಹಾಗೂ ಈ ಶಾಲೆಯ ಕಟ್ಟಡದ ಮೇಲೆ ವಿದ್ಯುತ್ ಹೈಟೆನ್ಸನ್ ತಂತಿ ಹಾದು ಹೋಗಿದ್ದು, ಹಾಗೂ ಮಹಾನಗರ ಪಾಲಿಕೆಯಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿರುವ ಪ್ರಯುಕ್ತ ಈ ಶಾಲೆಯ ಮಾನ್ಯತೆಯನ್ನು ಹಿಂಪಡೆಯಲಾಗಿದೆ.

Advertisement

ವಿದ್ಯಾರ್ಥಿಗಳ ಪೋಷಕರು ಈ ಶಾಲೆಗೆ ದಾಖಲಾತಿ ಮಾಡದಂತೆ ಹಾಗೂ ಈಗಾಗಲೇ ದಾಖಲಾತಿ ಹೊಂದಿರುವ ಮಕ್ಕಳನ್ನು ಸಂಬಂಧಿಸಿದ ಪೋಷಕರು ಸಮೀಪದ ಅಧಿಕೃತ ಶಾಲೆಗೆ ದಾಖಲಾತಿ ಮಾಡುವಂತೆ ಈ ಮೂಲಕ ಪೋಷಕರಿಗೆ ತಿಳಿಸಲಾಗಿದೆ ಎಂದು  ಉತ್ತರವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement