ಚಿತ್ರದುರ್ಗ: ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ನೂತನ ಅಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯಾದ ಹಿನ್ನೆಲೆಯಲ್ಲಿ ಪಕ್ಷದ ವಿವಿಧ ಜನರು ವಿವಿಧ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿಜಯೇಂದ್ರ ಆಯ್ಕೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಚಿವ ಡಿ ಸುಧಾಕರ್ ಅವರು ತಮ್ಮ ಅಭಿಪ್ರಾಯವನ್ನು ಬಹು ವಿಚಿತ್ರವಾಗಿ ವಿಜಯೇಂದ್ರ ಆಯ್ಕೆ “ಹೊಸ ಬಾಟಲಿಗೆ ಹಳೆ ವೈನ್ ಹಾಕಿದಂತೆ” ಆ ವಿಚಾರಕ್ಕೆ ನೋ ರಿಯಾಕ್ಷನ್ ಎಂದು ಸಚಿವ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿಯ ನೂತನ ರಾಜ್ಯಾದ್ಯಕ್ಷರಾಗಿ ವಿಜಯೇಂದ್ರ ಅವರು ನೇಮಕವಾಗಿರುವುದಕ್ಕೆ ಕೆಲ ಬಿಜೆಪಿ ನಾಯಕರು ಅಸಮಧಾನಗೊಂಡಿದ್ದಾರೆ.ಅವರ ಪಕ್ಷದಲ್ಲಿನ ಅಸಮಧಾನ ಅವರ ಆಂತರಿಕ ವಿಚಾರವಾಗಿದೆ. ಆದ್ದರಿಂದ ನಾವು ಆ ವಿಚಾರಕ್ಕೆ ಮೂಗು ತೂರಿಸುದಿಲ್ಲ ಎಂದು ಹೇಳಿದರು.
ರಾಜ್ಯದ ಪ್ರಬಲ ಸಮುದಾಯವಾದ ಲಿಂಗಾಯತರ ಓಲೈಕೆಗೆ ಬಿಜೆಪಿ ವಿಜಯೇಂದ್ರ ಅವರನ್ನು ಅಸ್ತ್ರವಾಗಿ ಬಳಸಿಕೊಂಡಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಡಿಕೆ ಶಿವಕುಮಾರ್‌ಗೆ ವಿಜಯೇಂದ್ರ ಅವರನ್ನು ಹೋಲಿಸಬೇಡಿ. ಕೆಪಿಸಿಸಿ ಅಧ್ಯಕ್ಷರಾದ ಡಿಕೆಶಿಯವರ ಅನುಭವ, ತಾಳ್ಮೆ ಹಾಗೂ ಪಕ್ಷ ಸಂಘಟನೆ ವಿಚಾರದಲ್ಲಿ ಅವರು ಸಾಟಿಯಲ್ಲ. ವಿಜಯೇಂದ್ರಗೆ ಡಿಕೆಶಿ ಹೋಲಿಕೆ ಸರಿಯಲ್ಲ. ರಾಜ್ಯದಲ್ಲಿ ಎಲ್ಲಾ ಜಾತಿಯವರು ಕಾಂಗ್ರೆಸ್ ಪಕ್ಷದ ಜೊತೆಗಿದ್ದಾರೆ. ಎಲ್ಲಾ ಸಮಾಜದ ಮತದಾರರು ನಮಗೆ ಮತ ಹಾಕಿದ್ದಾರೆ ಎಂದು ಮಾಧ್ಯಮದವರೊಂದಿಗೆ ಹೇಳಿದರು.