ಬೆಂಗಳೂರು: ರಾಜ್ಯ ಸರ್ಕಾರದ ಬಗ್ಗೆ ತಾಲಿಬಾನ್ ಮಾಡೆಲ್ ಸರ್ಕಾರವನ್ನು ಜಿಹಾದಿ ಮತಾಂಧ ಬ್ರದರ್ಸ್ ಎಂದು ಪೋಸ್ಟ್ ಮಾಡಿರುವುದನ್ನು ಆರೋಪಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅರ್ಜುನ್ ಮಯೂರ್ ಸಲ್ಲಿಸಿದ್ದ ದೂರಿನ ಅನ್ವಯ ವಿಜಯೇಂದ್ರ ಹಾಗೂ ಬಿಜೆಪಿ ಟ್ವಿಟ್ಟರ್ ಖಾತೆಯ ವಿರುದ್ಧ ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಬಿಜೆಪಿ ಶುಕ್ರವಾರ ಟ್ವಿಟ್ ಮಾಡಿತ್ತು.