ಬೆಂಗಳೂರು: SSLC ಹಾಗೂ ಮೆಟ್ರಿಕ್ ನಂತರದ ವ್ಯಾಸಂಗದಲ್ಲಿ ಮೊದಲ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ SC, ST ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ನೀಡುವ ಪ್ರೋತ್ಸಾಹಧನವನ್ನು ₹35,000 ವರೆಗೆ ಹೆಚ್ಚಿಸಲಾಗಿದೆ.
₹20,000 PUC-II ಅಥವ 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮಾಗೆ, ಪದವಿಗೆ ₹25,000, ಸ್ನಾತಕೋತ್ತರ ಪದವಿಗೆ ₹30,000 ಹಾಗೂ ಕೃಷಿ, ಇಂಜಿನಿಯರಿಂಗ್, ವೆಟರಿನರಿ, ಮೆಡಿಷನ್ ಗೆ ₹35,000 ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಡಿ.31 ಕೊನೆಯ ದಿನವಾಗಿದೆ.