ದಾವಣಗೆರೆ: ವಿದ್ಯಾರ್ಥಿಯರು ಕೇವಲ ಓದಿಗಷ್ಟೇ ಸೀಮಿತರಾಗದೇ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದುದಾವಣಗೆರೆ ಲೋಕಸಭಾ ಸದಸ್ಯರಾದ ಡಾ|| ಪ್ರಭಾ ಮಲ್ಲಿಕಾರ್ಜುನ್‌ಕರೆ ನೀಡಿದರು.
ಅವರಿಂದು ನಗರದ ಸೆಂಟ್ ಪಾಲ್ಸ್ಕಾನ್ವೆಂಟ್‌ನಲ್ಲಿಆಯೋಜಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ಕೇವಲ ಪಾಠಕ್ಕೆಮಾತ್ರ ಸೀಮಿತರಾಗುತ್ತಿದ್ದು, ಮಕ್ಕಳ ಆರೋಗ್ಯ ಮತ್ತುಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಓದಿನೊಂದಿಗೆ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನುತಾವು ತೊಡಗಿಸಿಕೊಳ್ಳಬೇಕೆಂದರು.
ಇದು ಪ್ರಸ್ತುತ ಮತ್ತು ಭವಿಷ್ಯದ ಬಗ್ಗೆ. ಹೊಸ ಸವಾಲುಗಳನ್ನು ಎದುರಿಸುತ್ತಿದ್ದು, ವೇಗವಾಗಿ ಬದಲಾಗುತ್ತಿರುವಜಗತ್ತನ್ನುನಾವು ಎದುರಿಸಬೇಕಾಗಿದೆಎಂದಅವರುವಿದ್ಯಾರ್ಥಿಗಳಾದ ನಾವು ಇಂದು ಪ್ರತಿಜ್ಞೆ ಮಾಡೋಣ. ಶಿಕ್ಷಕರು ನೀಡುವಜ್ಞಾನವನ್ನು ಪಾಲಿಸಲು, ಅವರ ಸಮರ್ಪಣೆಯನ್ನುಗೌರವಿಸಲು ಮತ್ತುಅವರುಒದಗಿಸುವ ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳಲು ಭರವಸೆ ನೀಡಬೇಕುಎಂದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದುತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಕಷ್ಟು ವೇದಿಕೆಗಳಿದ್ದು, ಆ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಎಂದುಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಸಿಸ್ಟರ್ ಸೇಲಾ, ಡಾ|| ಲತಾ, ಪದ್ಮಾ ಪ್ರಕಾಶ್, ಸಿಸ್ಟರ್ ವೆನ್ನಿಸಾ, ಸಿಸ್ಟರ್ ಲಿಂಡಾ, ಸಿಸ್ಟರ್ ಸುಪ್ರಿಯಾ, ಸಿಸ್ಟರ್ ರಶ್ಮಿ, ಜೆಸ್ಸಿ, ಶೈಲಜಾತಿಪ್ಪೇಸ್ವಾಮಿ, ಅಸಿಯಾ ಕೌಸರ್ ಮತ್ತಿತರರಿದ್ದರು.