ಚಿತ್ರದುರ್ಗ: ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ ಆರೋಪದ ಮೇಲೆ ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಶಾಲೆಯ ಮುಖ್ಯಶಿಕ್ಷಕನನ್ನು ಅಮಾನತುಗೊಳಿಸಿ ಡಿಡಿಪಿಐ ರವಿಶಂಕರರೆಡ್ಡಿ ಆದೇಶ ಹೊರಡಿಸಿದ್ದಾರೆ.
ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕಾರ್ಯನಿರ್ವಹಿಸುತ್ತಿದ್ದ ರಂಗಸ್ವಾಮಿ ವಿರುದ್ದ ಶೌಚಾಲಯ ತೊಳೆಯಲು ಬಳಸುವ ಆ್ಯಸಿಡ್ ಅನ್ನು ಬಾಲಕಿ ಮೇಲೆ ಎರಚಿದ ಆರೋಪ ಕೇಳಿಬಂದಿತ್ತು.
ದಸರಾ ರಜೆ ಮುಗಿಸಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ ವಿದ್ಯಾರ್ಥಿಗಳಿಗೆ ಶೌಚಾಲಯ ತೊಳೆಯಲು ಸೂಚಿಸಿದ್ದರಂತೆ. ಅದೇ ವೇಳೆ ಎರಡನೇ ತರಗತಿ ವಿದ್ಯಾರ್ಥಿನಿ ಸಿಂಚನಾ(8) ನೋಡಲೆಂದು ಅಲ್ಲಿಗೆ ತೆರಳಿದ್ದಾಳೆ. ಆಗ ಕೋಪಗೊಂಡ ಮುಖ್ಯ ಶಿಕ್ಷಕ ರಂಗಸ್ವಾಮಿ ಶೌಚಾಲಯ ತೊಳೆಯಲು ಇರಿಸಿದ್ದ ಆ್ಯಸಿಡ್ ತೆಗೆದುಕೊಂಡು ಎರಚಿದ್ದರು. ಈ ಪರಿಣಾಮ ಸಿಂಚನಾಳ ಬೆನ್ನಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಾಯಾಳು ಬಾಲಕಿಯ ತಾಯಿ ಪವಿತ್ರಾ ಆಗ್ರಹಿಸಿದ್ದರು
ಇನ್ನು ಗಾಯಾಳು ಸಿಂಚನಾಳನ್ನು ಮುಖ್ಯ ಶಿಕ್ಷಕ ರಂಗಸ್ವಾಮಿಯೇ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದರು. ಪಾಕೆಟ್ ಕಟ್ ಮಾಡಿದ ಪುಡಿ ಸಿಂಚನಾಳ ಮೇಲೆ ಬಿದ್ದಿತು. ಯಾವುದೇ ದುರುದ್ದೇಶದಿಂದ ಎರಚಿಲ್ಲ.
ಈ ಸಂಬಂಧ ಮುಖ್ಯಶಿಕ್ಷಕನ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಈಗ ಅಮಾನತುಗೊಳಿಸಲಾಗಿದೆ ರಂಗಸ್ವಾಮಿ ಹೇಳಿಕೆ ನೀಡಿದ್ದರು.