ಬೆಂಗಳೂರು:ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪೀಕರ್ ಖಾದರ್ ಘೋಷಿಸಿದ್ದಾರೆ.
ಈ ಬಗ್ಗೆ ಇಂದು ಸದನದಲ್ಲಿ ಮಾತನಾಡಿದ ಅವರು, ಈಗಾಗಲೇ ಸದಸ್ಯರಿಗೆ ತಿಂಡಿ ಜೊತೆಗೆ ಮಧ್ಯಾಹ್ನದ ಊಟಕ್ಕೂ ವ್ಯವಸ್ಥೆ ಮಾಡಲಾಗುವುದು. ನೀವೆಲ್ಲೇ ಹೋದರೂ ಇಲ್ಲಿಗಿಂತ ಉತ್ತಮ ಊಟ ಸಿಗುವುದಿಲ್ಲ ಎಂದು ಹೇಳಿದ್ದಾರೆ
ಶಾಸಕರು ಮಧ್ಯಾಹ್ನದ ಕಲಾಪಕ್ಕೆ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದ ಕಲಾಪ ಆರಂಭ ವಿಳಂಬವಾಗುತ್ತಿದೆ. ಈ ಹಿನ್ನೆಲೆ ಸ್ಪೀಕರ್ ಖಾದರ್ ಮಧ್ಯಾಹ್ನ ಬಿಸಿಯೂಟ ನೀಡುವ ಘೋಷಣೆ ಮಾಡಿದ್ದಾರೆ.
ಇನ್ನು ಸ್ಪೀಕರ್ ಅವರ ಘೋಷಣೆಗೆ ಮಾಜಿ ಸಚಿವ ಆರಗ ಜ್ಞಾನೆಂದ್ರ ತಮಾಷೆ ಮಾಡಿದ್ದಾರೆ. ಊಟದ ಜೊತೆಗೆ ಹಾಸಿಗೆ, ದಿಂಬು ನೀಡಿ, ಇಲ್ಲೇ ಸುಖವಾಗಿ ನಿದ್ದೇನೂ ಮಾಡುತ್ತೇವೆ ಎಂದು ಹೇಳುವ ಮೂಲಕ ಸ್ಪೀಕರ್ ಖಾದರ್ ಅವರ ಕಾಲೆಳೆದಿದ್ದಾರೆ.
ಈ ಹಿಂದೆಯೂ ಶಾಸಕರು ಲೇಟಾಗಿ ಬಂದಿದ್ದಾಗ ಸ್ಪೀಕರ್ ಪ್ರಶ್ನೆ ಮಾಡಿದ್ದರು. ಈ ವೇಳೆ ಶಾಸಕರು ಬಾಲಿಶವಾದ ಉತ್ತರಗಳನ್ನು ನೀಡಿದ್ದರು.