ಮುಂಬೈ:ವಿಭಜಕ ಶಕ್ತಿಗಳ ವಿರುದ್ಧ ಜಾಗರೂಕರಾಗಿರಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮನವಿ ಮಾಡಿದ್ದಾರೆ.
ಆರ್‌ಎಸ್‌ಎಸ್‌ನ ವಿಜಯದಶಮಿ ಉತ್ಸವದ ವೇಳೆ ನಾಗ್ಪುರದಲ್ಲಿ ಅವರು ಮಾತನಾಡಿ.ಐದು ರಾಜ್ಯಗಳಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಮತ್ತು 2024 ರ ರಾಷ್ಟ್ರೀಯ ಚುನಾವಣೆಯ ಮೊದಲು “ವಿಭಜಕ ಶಕ್ತಿಗಳ” ವಿರುದ್ಧ ಜಾಗರೂಕರಾಗಿರಲು ಜನರಿಗೆ ಕರೆ ನೀಡಿದರು ಮತ್ತು ಅತ್ಯಂತ ಸಮರ್ಥ ಅಭ್ಯರ್ಥಿಗಳನ್ನು ಬೆಂಬಲಿಸುವ ಮಹತ್ವವನ್ನು ಒತ್ತಿ ಹೇಳಿದರು.
ನಂಬಿಕೆಯ ಕೊರತೆಯಿಂದಾಗಿ ನಾವು ಕೆಲವೊಮ್ಮೆ ಅಂತರ್ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಇದರಿಂದ ಅನಗತ್ಯ ತೊಂದರೆಗಳು ಸೃಷ್ಟಿಯಾಗುತ್ತವೆ. ಭಾರತವು ಪ್ರಗತಿಯಾದರೆ ಅವರು ತಮ್ಮ ಆಟಗಳನ್ನು ಆಡಲು ಸಾಧ್ಯವಾಗುವುದಿಲ್ಲ ಎಂದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮನ ಮಂದಿರದಲ್ಲಿ ಜನವರಿ 22 ರಂದು ರಾಮನ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ.
ಅಂದು ಇಡೀ ದೇಶದಲ್ಲಿನ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಅಲ್ಲದೇ ದೇಶದೆಲ್ಲೆಡೆ ಏಕಕಾಲದಲ್ಲಿ ಪೂಜೆ ನಡೆಸಬಹುದು ಎಂದಿದ್ದಾರೆ.
ವಿಶ್ವದಲ್ಲಿ ಭಾರತದ ಹೆಮ್ಮೆ ಹೆಚ್ಚುತ್ತಿದೆ. ಭಾರತದಲ್ಲಿ ನಡೆದ ಜಿ20 ಶೃಂಗಸಭೆ ವಿಶೇಷವಾಗಿತ್ತು. ವಿವಿಧ ದೇಶಗಳ ಜನರು ನಮ್ಮ ವೈವಿಧ್ಯತೆಯನ್ನು ಸವಿದಿದ್ದಾರೆ. ಜೊತೆಗೆ ಭಾರತೀಯರ ಆತಿಥ್ಯವನ್ನು ಶ್ಲಾಘಿಸಿದ್ದಾರೆ ಎಂದರು.
ಕ್ರೀಡೆಯಲ್ಲಿ ಭಾರತ ಸಾಕಷ್ಟು ಸಾಧನೆ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.