ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದ ವೇಳೆ ಡ್ರೋನ್ ಎದುರಾಗಿ ಆತಂಕ ತಂದೊಡ್ಡಿತ್ತು. ಡ್ರೋನ್ ಆಪರೇಟರ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಇಂಡಿಗೊ ಸಂಸ್ಥೆಗೆ ಸೇರಿದ ಎರಡು ವಿಮಾನಗಳು, ಮಂಗಳವಾರ ಟೇಕಾಫ್ ವೇಳೆ ಡ್ರೋಣ್ ಎದುರಾಗಿತ್ತು. ವಿಮಾನಕ್ಕೆ ಅಪಾಯಕಾರಿ ರೀತಿಯಲ್ಲಿ ಡ್ರೋನ್ ಹಾದು ಹೋಗಿತ್ತು.
ಎರಡೂ ವಿಮಾನಗಳ ಪೈಲಟ್‌ಗಳು ವಾಯು ಸಂಚಾರ ನಿಯಂತ್ರಣ (ಎಟಿಸಿ) ವಿಭಾಗಕ್ಕೆ ಡ್ರೋಣ್ ತಂದೊಡ್ಡುತ್ತಿದ್ದ ಅಪಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೆಐಎ ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ತನಿಖೆ ಆರಂಭಿಸಲಾಗಿದೆ. ಇದು ಯಾವ ಬಗೆಯ ಸಾಧನ ಎನ್ನುವುದನ್ನು ಪತ್ತೆ ಮಾಡಲು ಸಿಸಿ ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ. ಯಾವ ದಿಕ್ಕಿನಿಂದ ಬಂದಿದೆ. ಎರಡು ವಿಮಾನಗಳಿಗೆ ಎಷ್ಟು ಹತ್ತಿರ ಈ ಡ್ರೋನ್ ಹಾರಾಟ ನಡೆಸಿದೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.