ವಿವಾದಾತ್ಮಕ ಸೂಚನಾ ಫಲಕ ತೆರವುಗೊಳಿಸಿದ ತಾಲೂಕು ಆಸ್ಪತ್ರೆ

ಮಂಗಳೂರು: ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿದ್ದ ಬುರ್ಖಾ ತೆಗೆದು ಒಳಗೆ ಬನ್ನಿ ಎಂಬ ಸೂಚನಾ ಫಲಕವನ್ನು ತೆರವುಗೊಳಿಸಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ರೋಗಿಗಳ ರೂಮ್ ಬಾಗಿಲಿನಲ್ಲಿ ಈ ಘಲಕವನ್ನು ನೇತು ಹಾಕಲಾಗಿತ್ತು . ಆದರೆ ಯಾರೋ ಒಬ್ಬರು ಈ ಸೂಚನ ಫಲಕದ ಪೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.

ಪೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ, ಸೂಚನಾ ಫಲಕವನ್ನು ತೆರವುಗೊಳಿಸಬೇಕೆಂಬ ಆಗ್ರಹ ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಇದೀಗ ಸೂಚನಾ ಫಲಕವನ್ನು ತೆಗೆದು ಹಾಕಲಾಗಿದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement