ವಿಶೇಷ ಅಧಿವೇಶನ: 75 ವರ್ಷದ ಪಯಣದೊಂದಿಗೆ ಹಳೆ ಸಂಸತ್ ಭವನಕ್ಕೆ ವಿದಾಯ

ನವದೆಹಲಿ: ಇಂದಿನಿಂದ ಐದು ದಿನಗಳ ಕಾಲ ವಿಶೇಷ ಅಧಿವೇಶನ ಪ್ರಾರಂಭವಾಗಲಿದ್ದು, ಸಂಸತ್ತಿನ 75 ವರ್ಷಗಳ ಪಯಣ ಮತ್ತು ಸೆಪ್ಟೆಂಬರ್ 19 ರಂದು ನೂತನ ಕಟ್ಟಡಲ್ಲಿ ಅಧಿವೇಶ ಹಾಗೂ ಕಡೇ ಅಧಿವೇಶನದ ಮೂಲಕ ಹಳೆ ಕಟ್ಟಡಕ್ಕೆ ಭಾವನಾತ್ಮಕ ವಿದಾಯದ ನಡುವೆ ಸರ್ಕಾರವು ಕೆಲವು ಪ್ರಮುಖ ಮಸೂದೆಗಳನ್ನು ಮಂಡಿಸಲು ಮುಂದಾಗಲಿದೆ.

ಇಂದು ಮೊದಲ ದಿನದ ಅಧಿವೇಶನ ಹಳೆಯ ಕಟ್ಟಡದಲ್ಲಿ ನಡೆಯುತ್ತಿದ್ದು, ಬಳಿಕ ನಾಳೆಯಿಂದ ಹೊಸ ಸಂಸತ್ತಿನಲ್ಲಿ ಪ್ರಾರಂಭವಾಗಲಿದೆ. ಹೊಸ ಕಟ್ಟಡ ಮತ್ತು ವಿಶೇಷ ಅಧಿವೇಶನದ ಆರಂಭದೊಂದಿಗೆ ಸಂಸತ್ತಿನ ಉಭಯ ಸದನಗಳ ಸಿಬ್ಬಂದಿಗೆ ಹೊಸ ಸಮವಸ್ತ್ರವೂ ಬರುತ್ತದೆ. ಇವರಲ್ಲಿ ಚೇಂಬರ್ ಅಟೆಂಡೆಂಟ್‌ಗಳು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಚಾಲಕರು ಮತ್ತು ಮಾರ್ಷಲ್‌ಗಳು ವಿಶೇಷ ಅಧಿವೇಶನದಲ್ಲಿ ಹೊಸ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುಲಿದ್ದಾರೆ.

ಮೊದಲ ದಿನ ರಾಜ್ಯಸಭೆಯಲ್ಲಿ 75 ವರ್ಷಗಳ ಸಂಸದೀಯ ಪಯಣ, ಸಾಧನೆ, ಅನುಭವ ಇತ್ಯಾದಿಗಳ ಕುರಿತು ಚರ್ಚೆಯಾಗಲಿದೆ. ಬಳಿಕ ಪೋಸ್ಟ್ ಆಫೀಸ್ ಬಿಲ್, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ. ಇದಲ್ಲದೆ, ವಕೀಲರ ತಿದ್ದುಪಡಿ ಮಸೂದೆ-2023, ಪತ್ರಿಕೆ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ-2023 ಅನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ ಎಂದು ವರದಿಯಾಗಿದೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement